ಕರ್ನಾಟಕ ಹಾಗೂ ತಮಿಳುನಾಡು ನಡುವಣ ಅರಣ್ಯ ಗಡಿ ತಂಟೆ ಪರಿಹಾರಕ್ಕಾಗಿ ಶೀಘ್ರವೇ ಗಡಿ ಸರ್ವೇ ಆರಂಭಿಸಲು ತೀರ್ಮಾನಿಸಲಾಗಿದೆ.
ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಒಟ್ಟು 150 ಕಿ.ಮೀ. ಉದ್ದದಷ್ಟು ಗಡಿಯಿದೆ. ಇದು ಬಹುತೇಕ ಅರಣ್ಯದ ಗಡಿಯೂ ಆಗಿದೆ. ಈ ಗಡಿಭಾಗದ ಹಲವು ಪ್ರದೇಶಗಳು ಯಾವ ರಾಜ್ಯಕ್ಕೆ ಸೇರಿದ್ದು ಎಂಬ ಕುರಿತು ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ವಿವಾದವಿದೆ.
ಇದನ್ನು ಬಗೆಹರಿಸಲು ಅರಣ್ಯ ಗಡಿ ಸರ್ವೇ ಕಾರ್ಯ ನಡೆಸಲು ಎರಡು ರಾಜ್ಯಗಳ ಅರಣ್ಯ ಇಲಾಖೆಗಳು ಅಂಗೀಕರಿಸಿವೆ.
ಹೊಗೇನಕಲ್ ಅರಣ್ಯ ಪ್ರದೇಶದ ಕೆಲ ಭಾಗಗಳು ಯಾವ ರಾಜ್ಯಕ್ಕೆ ಸೇರಬೇಕು ಎಂಬ ಬಗ್ಗೆ ವಿವಾದವಿದೆ.
ಹೀಗಾಗಿ ಗಡಿಯನ್ನು ಸಮರ್ಪಕವಾಗಿ ಗುರುತಿಸಿ, ಗಡಿಕಲ್ಲು ಅಳವಡಿಸುವ ಕುರಿತು ತಮಿಳುನಾಡು ಅರಣ್ಯ ಇಲಾಖೆಯ ಅಧಿಕಾರಿಗಳು ಜತೆ ಚರ್ಚೆ ನಡೆಸಲಾಯಿತು ಎಂದು ಕರ್ನಾಟಕ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅವನಿಕುಮಾರ್ ತಿಳಿಸಿದ್ದಾರೆ.
|