ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ಮೂವರನ್ನು ಬೆಂಗಳೂರಿನ ತ್ಯಾಗರಾಜ ನಗರ ಪೊಲೀಸರ ಬಂಧಿಸಿದ್ದಾರೆ. ಬಂಧಿತರಿಂದ 1.5 ಲಕ್ಷ ರೂ ಮತ್ತು ನಾಲ್ಕು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ, ಟ್ವೆಂಟಿ, ಟ್ವೆಂಟಿ ಕ್ರಿಕೆಟ್ ಪಂಡ್ಯಾಟ ನಡೆಯುತ್ತಿದ್ದ ವೇಳೆ ಬೆಟ್ಟಿ ಂಗ್ ನಡೆಸುತ್ತಿದ್ದಾರೆ ಎಂಬ ಖಚಿತ ವರ್ತಮಾನ ಮೇರೆಗೆ ಈ ಬಂಧನ ನಡೆದಿದೆ.
ಆರೋಪಿಗಳು ಭಾರತದ ಪರ ಶೇ 40 ಮತ್ತು ಆಸ್ಟ್ತ್ರೇಲಿಯಾ ಪರ ಶೇ 45 ದರದಲ್ಲಿ ಬೆಟ್ಟಿಂಗ್ ಕಟ್ಟುತ್ತಿದ್ದರು. ಬಂಧಿತರನ್ನು ಉಮೇಶ್, ಕಿಶೋರ್ ಮತ್ತು ರಾಜಾ ಎಂದು ಗುರುತಿಸಲಾಗಿದೆ.
ಆರೋಪಿಗಳು ಮುಂಬೈ, ಕೋಲ್ಕತ್ತಾ ಸೇರಿದಂತೆ ವಿವಿಧೆಡೆ ಬುಕ್ಕಿಗಳ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಶ್ರೀರಾಂಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
|