ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ನೆರೆ ಹಾವಳಿ 700ಕೋಟಿಗೂ ಅಧಿಕ ನಷ್ಟ
ರಾಜ್ಯದಲ್ಲಿ ನೆರೆ ಹಾವಳಿಯಿಂದಾಗಿ ಈ ಬಾರಿ 700 ಕೋಟಿ ಗೂ ಅಧಿಕ ನಷ್ಟ ಸಂಭವಿಸಿದೆ ಧಾರವಾಡ, ಗದಗ, ಹುಬ್ಬಳ್ಳಿ ರಾಯಚೂರು ಹೀಗೆ ಉತ್ತರ ಕರ್ನಾಟಕ ಭಾಗಗಳಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ನಷ್ಟದ ಪ್ರಮಾಣ ತೀವ್ರ ಹೆಚ್ಚಿದೆ.

ನೆರೆ ಹಾವಳಿಯ ಬಗ್ಗೆ ವ್ಯಾಪಕ ಅಧ್ಯಯನ ನಡೆಸಲಾಗುತ್ತಿದ್ದು, ಪ್ರಾಥಮಿಕ ಹಂತದ ಲೆಕ್ಕಾಚಾರದಂತೆ 600 ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರಕಕ್ಕೆ ಈ ಸಂಬಂಧ ಮನವಿ ಮಾಡಲಾಗಿದೆ. ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಸಂತ್ರಸ್ತ ಪ್ರದೇಶಗಳನ್ನು ವೈಮಾನಿಕ ಸಮೀಕ್ಷೆಯ ಮುಖಾಂತರ ಪರೀಶೀಲಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು
ಕ್ರಿಕೆಟ್ ಬೆಟ್ಟಿಂಗ್ ಮೂವರ ಬಂಧನ
ಗಡಿ ವಿವಾದ ಪರಿಹಾರಕ್ಕೆ ಸರ್ವೇ
ಸ್ಥಳೀಯ ಚುನಾವಣೆ: ಬಿರುಸಿನ ಪ್ರಚಾರ
ಕ್ರೈಸ್ತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ: ಪ್ರತಿಭಟನೆ
ಗಣಪತಿ ವಿಸರ್ಜನೆ: ಗಾಳಿಯಲ್ಲಿ ಗುಂಡು
ಅಧಿಕಾರ ಹಸ್ತಾಂತರ ಸುಗಮ: ವೆಂಕಯ್ಯನಾಯ್ಡು