ಕರುಣಾನಿಧಿ ಪುತ್ರಿ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಗರ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ. ಜೆ.ಪಿ.ನಗರ ಸಾರಕ್ಕೆ ನಿವಾಸಿಗಳಾದ ಪೆಯಿಂಟರ್ ಮಂಜುನಾಥ (32), ರಿಯಲ್ ಎಸ್ಟೇಟ್ ವ್ಯಾಪಾರಿ ಸಂತೊಷ್ (24), ಪಂತರಪಾಳ್ಯ ನಿವಾಸಿ ಹಾಗೂ ಫೋಟೋಗ್ರಾಫರ್ ಹರೀಶ್ (32) ಎಂದು ಆರೋಪಿಗಳನ್ನು ಗುರುತಿಸಲಾಗಿದೆ. ಈ ಪ್ರಕರಣದ ಇನ್ನೂ 10 ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ತಮಿಳುನಾಡು ಬಸ್ಸಿಗೆ ಬೆಂಕಿ ಹಚ್ಚಿ ಇಬ್ಬರನ್ನು ಬಲಿ ತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತರಾಗಿರುವ 11 ಮಂದಿಯ ನ್ಯಾಯಾಂಗ ಬಂಧನ ಅವಧಿಯನ್ನು ಅ. 10ರವರೆಗೆ ವಿಸ್ತರಿಸಲಾಗಿದೆ.
ಮಡಿವಾಳ ಪೊಲೀಸರು 11 ಮಂದಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
|