ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕುಮಾರಸ್ವಾಮಿಗೆ ಡೆಪ್ಯೂಟಿ ಸಿಎಂ ?
ಒಂದು ಬಾರಿ ಮುಖ್ಯಮಂತ್ರಿ ಆದವರು ಮತ್ತೆ ಉಪಮುಖ್ಯಮಂತ್ರಿ ಹುದ್ದೆ ಸ್ವೀಕರಿಸಲು ಸಾಧ್ಯವೇ ? ಕರ್ನಾಟಕದಲ್ಲಿ ಇಂಥದೊಂದು ಕುತೂಹಲದ ಸನ್ನಿವೇಶ ಎದುರಾಗಿದೆ.

ಅಧಿಕಾರ ಹಸ್ತಾಂತರಕ್ಕೆ ಕೇವಲ ಹತ್ತು ದಿನಗಳು ಬಾಕಿ ಇರುವಾಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮುಂದಿನ ಹೆಜ್ಜೆ ಯಾವುದು ಎಂಬುದರ ಬಗ್ಗೆ ರಾಜಕೀಯ ವಲಯದಲ್ಲಿ ಪ್ರಶ್ನೆ ಎದುರಾಗಿದೆ.

ಮುಖ್ಯಮಂತ್ರಿ ಹುದ್ದೆಯಲ್ಲೇ ಮುಂದುವರೆಯುವಂತೆ ಜೆಡಿಎಸ್ ಶಾಸಕರು ಸಚಿವರು ಒತ್ತಡ ಹೇರುತ್ತಿರುವುದು ತಿಳಿದ ವಿಷಯವೇ. ಆದರೆ ಒಪ್ಪಂದದಂತೆ ಅಧಿಕಾರವನ್ನು ಬಿಜಿಪಿಗೆ ಹಸ್ತಾಂತರಿಸಲೇ ಬೇಕಾಗಿದೆ.

ಮುಖ್ಯಮಂತ್ರಿಯಾಗಿದ್ದವರು ಸಾಮಾನ್ಯ ಶಾಸಕರಾಗಿ ಪರಿವರ್ತಿತಗೊಂಡರೆ ಶಾಸಕರಿಗೂ ಕಸಿವಿಸಿ. ಇಂಥ ಸನ್ನಿವೇಶದಲ್ಲಿ ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿಯಾದರೆ ಒಳ್ಳೆಯದು ಎಂಬುದು ಜೆಡಿಎಸ್ ವಲಯದ ಅಭಿಪ್ರಾಯ.

ಮುಂದಿನ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದರೆ ಕುಮಾರಸ್ವಾಮಿ ಅವರು ಗ್ರಾಮವಾಸ್ತವ್ಯ ಹಾಗೂ ಜನತಾ ದರ್ಶನವನ್ನು ಮುಂದುವರೆಸಬಹುದು. ಆ ಮೂಲಕ ಪಕ್ಷದ ವರ್ಚಸ್ಸು ಬೆಳೆಯುತ್ತದೆ.

ಮುಂದಿನ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಹೆಚ್ಚಿನ ಶಾಸಕ ಸ್ಥಾನಗಳು ಲಭಿಸಿ ಜೆಡಿಎಸ್ ಸರ್ಕಾರವೇ ರಚಿಸಬಹುದು ಎಂಬುದು ಜೆಡಿಎಸ್ ದೂರಾಲೋಚನೆ.
ಮತ್ತಷ್ಟು
ಸೆಲ್ವಿ ನಿವಾಸದ ಮೇಲೆ ದಾಳಿ : 3 ಬಂಧನ
ಕೇಂದ್ರ ಸಚಿವೆ ರಾಧಿಕಾ ಸೆಲ್ವಿ ವೈಮಾನಿಕ ಸಮೀಕ್ಷೆ
ಅತಿವೃಷ್ಟಿ: ನೆರವಿಗೆ ಕೇಂದ್ರಕ್ಕೆ ಮನವಿ
ನೆರೆ ಹಾವಳಿ 700ಕೋಟಿಗೂ ಅಧಿಕ ನಷ್ಟ
ಕ್ರಿಕೆಟ್ ಬೆಟ್ಟಿಂಗ್ ಮೂವರ ಬಂಧನ
ಗಡಿ ವಿವಾದ ಪರಿಹಾರಕ್ಕೆ ಸರ್ವೇ