ಸನ್ ಟಿವಿ ಡಿಟಿಎಚ್ ಸೇವೆ ಆರಂಭಿಸಿರುವುದನ್ನು ವಿರೋಧಿಸಿ ತಮಿಳುನಾಡು ಕೇಬಲ್ ಆಪರೇಟರ್‌ಗಳು ಹೋರಾಟದ ಹಾದಿ ಹಿಡಿದಿದ್ದರೂ ಕರ್ನಾಟಕದ ಕೇಬಲ್ ಆಪರೇಟರ್‌ಗಳು ರಾಜ್ಯದಲ್ಲಿ ಕೇಬಲ್ ಪ್ರಸಾರ ಬಂದ್ ಮಾಡದಿರಲು ನಿರ್ಧರಿಸಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಸಿಎಸ್ (ಕಂಡಿಷನರ್ ಆಕ್ಸೆಸ್ ಸಿಸ್ಟಮ್)ನ್ನು ತಕ್ಷಣ ಜಾರಿಗೊಳಿಸುವಂತೆ ಮನವಿ ಸಲ್ಲಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಕೇಬಲ್ ಆಪರೇಟರ್‌ಗಳು ಸಂಘದ ಅಧ್ಯಕ್ಷ ಪ್ಯಾಟ್ರಿಕ್ ರಾಜು ತಿಳಿಸಿದ್ದಾರೆ.
ಇಷ್ಟು ದಿನ ಕೇಬಲ್ ನೆಟ್ವರ್ಕ್ ಬಳಿಸಿಕೊಂಡ ಸನ್ ನೆಟ್ವರ್ಕ್ ಈಗ ಡಿಟಿಎಚ್ ಮಾಡುತ್ತಿರುವುದು ಸರಿಯಲ್ಲ.ಇದರಿಂದ ಕೇಬಲ್ ಆಪರೇಟರ್‌ಗಳಿಗೂ ತೊಂದರೆ ಆಗುತ್ತದೆ.
ಆದರೆ, ತಮಿಳುನಾಡು ಆಪರೇಟರ್‌ಗಳ ಹೋರಾಟದ ಹಿಂದೆ ರಾಜಕೀಯವಿದೆ ಎಂದು ರಾಜು ಹೇಳಿದ್ದಾರೆ.
|