ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
363 ಕೊಟಿ ರೂ.ಹಾನಿ: ಕೇಂದ್ರ ಸಚಿವೆ ಅ0ದಾಜು
ಉತ್ತರ ಕರ್ನಾಟಕದಲ್ಲಿ ಇತ್ತೀಚಿನ ಕುಂಭದ್ರೌಣ ಮಳೆ ಹಾಗೂ ಪ್ರವಾಹದಿಂದಾಗಿ 363 ಕೋಟಿ ರೂ. ಹಾನಿಯಾಗಿದೆ ಎಂದು ಕೇಂದ್ರ ಗೃಹ ಖಾತೆಯು ರಾಜ್ಯ ಸಚಿವೆ ರಾಧಿಕಾ ಸೆಲ್ವಿ ಹಾಗೂ ಅಧಿಕಾರಿಗಳ ತಂಡ ಅಂದಾಜು ಮಾಡಿದೆ.

ಧಾರವಾಡ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಈ ತಂಡ ಪ್ರವಾಹಕ್ಕೆ ತುತ್ತಾದ ಪ್ರದೇಶದಲ್ಲಿ ಬೆಳೆ, ಮನೆ, ರಸ್ತೆ ಜಾನುವಾರುಗಳಿಗೆ ಆಗಿರುವ ಹಾನಿಯ ಅಂದಾಜು ಮಾಡಿದೆ.

ಗದಗ ಜಿಲ್ಲೆಯಲ್ಲಿ 159 ಕೋಟಿ ರೂ., ಧಾರವಾಡ ಜಿಲ್ಲೆಯಲ್ಲಿ 124 ಕೊಟಿ ರೂ. ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ 80 ಕೋಟಿ ರೂ. ಹಾನಿ ಉಂಟುಮಾಡಿದೆ.
ಇಲ್ಲಿನ ಜನರು ಪುನಃ ಸಹಜ ಜೀವನ ನಡೆಸಲು ಬಹಳಷ್ಟು ಕಾಲಾವಕಾಶಬೇಕಿದೆ.

ಬೆಳೆ ಹಾನಿ ಹಾಗೂ ರಸ್ತೆ ಇತ್ಯಾದಿ ಮೂಲಭೂತ ಸೌಲಭ್ಯಗಳಿಗೆ ಉಂಟಾಗಿರುವ ಹಾನಿ ಕುರಿತು ಸದ್ಯದಲ್ಲೇ ಇಲ್ಲಿಗೆ ಆಗಮಿಸಲಿರುವ ಕೇಂದ್ರ ತಂಡ ಸಮೀಕ್ಷೆ ನಡೆಸಿ ವರದಿ ನೀಡಲಿದೆ.

ಆಗಸ್ಟ್‌ನಲ್ಲಿ ಸಂಭವಿಸಿದ ನೆರೆ ಹಾನಿಗೆ ಪರಿಹಾರ ಕೋರಿ ಕಳೆದ ವಾರ ರಾಜ್ಯ ಸರ್ಕಾರ 1500 ಕೊಟಿ ರೂ. ಪ್ರಸ್ತಾವನೆ ಸಲ್ಲಿಸಿದೆ. ಈ ಕುರಿತು ಕೇಂದ್ರದ ತಂಡ ಸದ್ಯದಲ್ಲೇ ಸಮೀಕ್ಷೆ ನಡೆಸಲಿದೆ ಎಂದು ಸಚಿವೆ ರಾಧಿಕಾ ಸೆಲ್ವಿ ತಿಳಿಸಿದ್ದಾರೆ.
ಮತ್ತಷ್ಟು
ಸನ್ ಟಿವಿ ವಿರುದ್ದ ಹೋರಾಟ
ಕುಮಾರಸ್ವಾಮಿಗೆ ಡೆಪ್ಯೂಟಿ ಸಿಎಂ ?
ಸೆಲ್ವಿ ನಿವಾಸದ ಮೇಲೆ ದಾಳಿ : 3 ಬಂಧನ
ಕೇಂದ್ರ ಸಚಿವೆ ರಾಧಿಕಾ ಸೆಲ್ವಿ ವೈಮಾನಿಕ ಸಮೀಕ್ಷೆ
ಅತಿವೃಷ್ಟಿ: ನೆರವಿಗೆ ಕೇಂದ್ರಕ್ಕೆ ಮನವಿ
ನೆರೆ ಹಾವಳಿ 700ಕೋಟಿಗೂ ಅಧಿಕ ನಷ್ಟ