ರಾಜ್ಯದಲ್ಲಿ ಸಾರಾಯಿ ನಿಷೇಧಿಸಿದ ಸರ್ಕಾರ ಇನ್ನುಮುಂದೆ ಬಡವರು ಸಾರಾಯಿ ತಂಟೆಗೆ ಹೋಗುವುದಿಲ,. ಹಾಗಾಗಿ ಅವರ ಜೀವನ ಸುಧಾರಿಸುತ್ತದೆ ಎಂಬ ನೀರೀಕ್ಷೆ ಈಡೇರುತ್ತಿಲ್ಲ.
ರಾಜ್ಯದ ಬಹುತೇಕ ಹಳ್ಳಿಗಳಲ್ಲಿ ನಕಲಿ ಮದ್ಯ ದಂಧೆ ಆಕ್ರಮಿಸಿಕೊಂಡಿದೆ. ಸಾರಾಯಿ ಮಾರಾಟವಾಗುತ್ತಿದ್ದಾಗಲು ಈ ದಂಧೆ ನಡೆಯುತ್ತಿತ್ತಾದರು ಇಷ್ಟೊಂದು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರಲಿಲ್ಲ. ಸಾರಾಯಿ ಮಾರಾಟ ನಿಷೇಧದ ನಂತರ ನಕಲಿ ಮದ್ಯಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಇದರಿಂದಾಗಿ ಮಾರಾಟಗಾರರಿಗೂ ಹೆಚ್ಚಿನ ಲಾಭವಾಗುತ್ತಿದೆ.
ಬೆಂಗಳೂರು ಸಮೀಪದ ಹೊಸಕೋಟೆ ತಾಲೂಕಿನ ಬೈಲ್ನರಸಾಪುರ ನಕಲಿ ಮದ್ಯಕ್ಕೆ ಕುಖ್ಯಾತಿ ಪಡೆದಿದೆ.
ಹಳ್ಳಿಗಳಲ್ಲಿ ನಡೆಯುವ ಮದ್ಯ ಮಾರಾಟ ತಡೆಗಟ್ಟಲು ಪೊಲೀಸರೊಂದಿಗೆ ಅಬಕಾರಿ ಸಿಬ್ಬಂದಿ ದಾಳಿ ಮಾಡಿದರೂ ಏನು ಪ್ರಯೋಜನವಾಗುತ್ತಿಲ್ಲ.
ದಾಳಿಯಲ್ಲಿ ಬಂಧನಕ್ಕೊಳಗಾದವರು ಕೆಲ ದಿನಗಳಲ್ಲೇ ಮುಖಂಡರ ಪ್ರಭಾವ ಬಳಿಸಿ ಹೊರಗೆ ಬಂದು, ಮತ್ತೆ ದಂಧೆ ಶುರುವಿಟ್ಟುಕೊಳ್ಳುತ್ತಾರೆ. ಪಕ್ಕಾ ಗುಪ್ತ ವ್ಯವಹಾರವಾದ್ದರಿಂದ ಈ ವ್ಯಾಪಾರ ದಿನೇದಿನೇ ಹೆಚ್ಚುತ್ತಿದೆ.
|