ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕನ್ನಡ ಸಾಹಿತ್ಯ ಸಮ್ಮೇಳನ ಆತಂಕದಲ್ಲಿ
ಉಡುಪಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನ ವಿವಾದದಲ್ಲಿ ಸಿಲುಕಿದೆ. ಸಮ್ಮೇಳನದ ಅಧ್ಯಕ್ಷರನ್ನು ಬದಲಾಯಿಸಬೇಕೆಂದು ಕೋಮು ಸೌಹಾರ್ದ ವೇದಿಕೆ ಒತ್ತಾಯಿಸುತ್ತಿದೆ.

ಇಲ್ಲದಿದ್ದಲ್ಲಿ, ಪರ್ಯಾಯ ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಪ್ರಸಕ್ತ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಪ್ರೊ.ಎಲ್.ಎಸ್. ಶೇಷಗಿರಿರಾವ್ ಬಲಪಂಥೀಯ ವಿಚಾರಧಾರೆ ಹೊಂದಿದ್ದಾರೆ.

ಅಲ್ಲದೆ, ಸಂಘ ಪರಿವಾರದ ರಾಷ್ಟ್ತ್ರೌತ್ಥಾನ ಬಳಗ ಸೇರಿದಂತೆ ಹಲವಾರು ಬಲಪಂಥೀಯ ಚುಟುವಟಿಕೆಗಳನ್ನು ನಡೆಸಿದ ಅಪ್ಪಟ ಕೋಮುವಾದಿ ಎಂದು ವೇದಿಕೆ ಆರೋಪಿಸಿದೆ. ಇದಲ್ಲದೆ ಸಂಘಟಕರು ಕೋಮುವಾದಿಗಳಾಗಿದ್ದಾರೆ ಎಂದು ಅದು ಟೀಕಿಸಿದೆ.

ಶೇಷಗಿರಿರಾವ್ ಅವರಂಥ ವ್ಯಕ್ತಿಗಳು ಸಮ್ಮೇಳನಾಧ್ಯಕ್ಷರಾಗಿರುವುದು ದುರಂತ ಎಂದು ವೇದಿಕೆ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ್ ತಿಳಿಸಿದ್ದಾರೆ.

ಸ್ವಾಗತ ಸಮಿತಿ ಗೌರವಾಧ್ಯಕ್ಷ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥರು ಮತ್ತು ಮಣಿಪಾಲ ಸಮೂಹ ಸಂಸ್ಥೆಗಳ ಅಧ್ಯಕ್ಷ ಕೆ.ಕೆ. ಪೈ ಹಲವಾರು ಬಾರಿ ಕೋಮು ಉದ್ವಿಗ್ನತೆಗೆ ಕಾರಣರಾಗಿದ್ದಾರೆ ಎಂದು ದೂರಿದ್ದಾರೆ.

ಕೋಮುವಾದಿ ಧೋರಣೆ ಬಿಟ್ಟು ಸಮ್ಮೇಳನಾಧ್ಯಕ್ಷರನ್ನು ಬದಲಾಯಿಸಬೇಕು. ಇಲ್ಲದಿದ್ದರೆ ಅದೇ ದಿನ ಉಡುಪಿಯಲ್ಲಿ ಪ್ರಗತಿಪರ ಧೋರಣೆಯ ಸಾಹಿತಿ-ಚಿಂತಕರು ಸೇರಿ ಪರ್ಯಾಯ ಸಮ್ಮೇಳನ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಮತ್ತಷ್ಟು
ನಕಲಿ ಮದ್ಯದ ದಂಧೆ ಹೆಚ್ಚಳ
363 ಕೊಟಿ ರೂ.ಹಾನಿ: ಕೇಂದ್ರ ಸಚಿವೆ ಅ0ದಾಜು
ಸನ್ ಟಿವಿ ವಿರುದ್ದ ಹೋರಾಟ
ಕುಮಾರಸ್ವಾಮಿಗೆ ಡೆಪ್ಯೂಟಿ ಸಿಎಂ ?
ಸೆಲ್ವಿ ನಿವಾಸದ ಮೇಲೆ ದಾಳಿ : 3 ಬಂಧನ
ಕೇಂದ್ರ ಸಚಿವೆ ರಾಧಿಕಾ ಸೆಲ್ವಿ ವೈಮಾನಿಕ ಸಮೀಕ್ಷೆ