ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಎಂಇಎಸ್‌ಗೆ ಕನ್ನಡ ಅಭ್ಯರ್ಥಿಗಳ ಸೆಡ್ಡು
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಹಾರಾಷ್ಟ್ತ್ರ ಏಕೀಕರಣ ಸಮಿತಿಯನ್ನು ಎದುರಿಸುವುದಕ್ಕಾಗಿ ರಚಿಸಲಾಗಿರುವ ಕನ್ನಡಪರ ಅಭ್ಯರ್ಥಿಗಳ ಒಕ್ಕೂಟ ಸರ್ವಪಕ್ಷ ಸರ್ವ ಭಾಷಿಕ ಚುನಾವಣೆ ಸಮಿತಿ ಚುನಾವಣಾ ಪ್ರಚಾರವನ್ನು ಆರಂಭಿಸಿದೆ.

ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಸಂಯುಕ್ತವಾಗಿ ಕನ್ನಡ ಸಂಘಟನೆಗಳ ಪ್ರಮುಖರ ಜತೆ ಬೆಳಗಾವಿಯಲ್ಲಿ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.

ಜೆಡಿಎಸ್ ಪರವಾಗಿ ವಿಧಾನಪರಿಷತ್ ಉಪ ಸಭಾಪತಿ ಸಚ್ಚಿದಾನಂದ ಖೋತ್, ಬಿಜೆಪಿ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಶಿಕಾಂತ ನಾಯಿಕ ಹಾಗೂ ಕಾಂಗ್ರೆಸ್ ಪರವಾಗಿ ಶಾಸಕ ರಮೇಶ್ ಕುಡಚಿ ಪ್ರಚಾರದ ನೇತೃತ್ವ ವಹಿಸಿದ್ದರು. ವಿವಿಧ ಗುಂಪುಗಳಲ್ಲಿ ನಗರದ ಪ್ರತಿ ವಾರ್ಡ್‌ಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ.
ಮತ್ತಷ್ಟು
ನಕ್ಸಲೀಯ ನಿಗ್ರಹಕ್ಕೆ ಕೇಂದ್ರ ಸಹಕಾರ ನೀಡಲಿ
ಬಿಜೆಪಿ ಸಖ್ಯ ಮುಸ್ಲಿಂರ ಅಕ್ರೋಶ : ಮೆರಾಜುದ್ದೀನ್
ಕನ್ನಡ ಸಾಹಿತ್ಯ ಸಮ್ಮೇಳನ ಆತಂಕದಲ್ಲಿ
ನಕಲಿ ಮದ್ಯದ ದಂಧೆ ಹೆಚ್ಚಳ
363 ಕೊಟಿ ರೂ.ಹಾನಿ: ಕೇಂದ್ರ ಸಚಿವೆ ಅ0ದಾಜು
ಸನ್ ಟಿವಿ ವಿರುದ್ದ ಹೋರಾಟ