ಗಂಟೆಗಟ್ಟಲೆ ಮೊಬೈಲ್ ಫೋನ್‌ಗೆ ಕಿವಿ ಒಪ್ಪಿಸಿ ಕೇಳುವವರನ್ನು ನೊಡಿದ್ದಿರಿ. ಹಾಗೇ ಮ್ಯೂಸಿಕ್ ಪ್ಲೇಯರ್ ಇಯರ್‌ಫೋನ್ ಕಿವಿಗೆ ಅಳವಡಿಸಿಕೊಂಡು ಸಂತೋಷಪಡುವುದನ್ನು ನೋಡಿದ್ದಿರಿ. ಇಂಥ ಅಭ್ಯಾಸಗಳಿಂದ ಶ್ರವಣ ದೊಷ ಉಂಟಾಗುತ್ತದೆ ಎಂದು ಎಚ್ಚರಿಸುತ್ತಿದ್ದಾರೆ ಶ್ರವಣದೋಷ ನಿವಾರಿಸುವ ತಜ್ಞರು. ಪ್ರತಿವರ್ಷ ಸೆಪ್ಟೆಂಬರ್ 23ರಂದು ವಿಶ್ವ ಶ್ರವಣದೋಷ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ವಿಶ್ವದಾದ್ಯಂತ ಸುಮಾರು 500 ದಶಲಕ್ಷ ಜನರು ಒಂದಲ್ಲಾ ಒಂದು ರೀತಿಯ ಶ್ರವಣ ದೋಷದಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.
ವಿಶ್ವದಲ್ಲಿ 1000 ಮಕ್ಕಳಲ್ಲಿ ಇಬ್ಬರು ಹುಟ್ಟುವಾಗಲೇ ಶ್ರವಣ ದೋಷದ ತೊಂದರೆ ಅನುಭವಿಸುತ್ತಾರೆ.
ಆದರೆ ಭಾರತದಲ್ಲಿ ಈ ಸಂಖ್ಯೆ 3 ರಿಂದ 4 ರಷ್ಟಿದೆ ಎಂದು ವೈದ್ಯರು ಹೇಳುತ್ತಾರೆ. ಕಾಲ್ಸೆಂಟರ್‌ಳಲ್ಲಿ ದುಡಿಯುವ ಯುವಜನರು ಭಾರತದಲ್ಲಿ ಈ ಕಿವುಡು ರೋಗಕ್ಕೆ ತುತ್ತಾಗುತ್ತಿದ್ದಾರೆ.
|