ರಾಜ್ಯ ಸರಕಾರದ ವಿವಿದ ಇಲಾಖೆಗಳ ಕಾರ್ಯ ನಿರ್ವಹಣೆಯನ್ನು ಇ ಗವರ್ನನ್ಸ್‌ಗೆ ಒಳಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಮತ್ತು ಮೈಕ್ರೊಸಾಪ್ಟ್ ಕಂಪನಿಯ ನಡುವೆ ತಿಳುವಳಿಕಾ ಪತ್ರಕ್ಕೆ ಸಹಿ ಹಾಕಲಾಯಿತು.
ಪುಸ್ತಕ ರಹಿತ ಕಾರ್ಯಾಲಯವನ್ನಾಗಿ ರಾಜ್ಯ ಸರಕಾರದ ಪ್ರಮುಖ ಇಲಾಖೆಗಳನ್ನು ಇ ಗವರ್ನನ್ಸ್‌ಗೆ ಒಳಪಡಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ಈ ನಿಟ್ಟಿನಲ್ಲಿ ಉಭಯ ಪಕ್ಷಗಳ ನಡುವೆ ಬರಲಾಗಿರುವ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು,
ಪರಿಚಯಾತ್ಮಕ ಇ ಗವರ್ನನ್ಸ್‌ಗೆ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯನ್ನು ಆಯ್ದುಕೊಳ್ಳಲಾಗಿದ್ದು, ಮುಂದಿನ ವಾರದಿಂದ ಮೈಕ್ರೊಸಾಪ್ಟ ಕಂಪನಿ ಕೆಲಸ ಪ್ರಾರಂಭಿಸಲಿದೆ. ಈ ಇಲಾಖೆಯನ್ನು ಇ-ಗವರ್ನನ್ಸ್‌ಗೆ ಒಳಪಡಿಸಿದ ನಂತರ ಇತರ ಇಲಾಖೆಗಳಲ್ಲಿ ಯೋಜನೆಯ ಅನುಷ್ಟಾನ ಪ್ರಾರಂಭವಾಗಲಿದೆ ಎಂದು ಪತ್ರಕರ್ತರಿಗೆ ಮಾಹಿತಿ ನೀಡಿದರು.
ಹಣಕಾಸು ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಒಪ್ಪಂದದಲ್ಲಿ ಯೋಜನೆಯ ಅನುಷ್ಟಾನಕ್ಕೆ ಸರಕಾರ ಹಣ ವೆಚ್ಚ ಮಾಡುತ್ತಿಲ್ಲ ಎಂದು ಹೇಳಿದರು.
|