ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕ್ರಿಕೆಟ್ ವಿಜಯೋತ್ಸವ: ಗುಂಪು ಘರ್ಷಣೆ
ಕ್ರಿಕೆಟ್ ವಿಜಯೋತ್ಸವ ಆಚರಣೆ ನಡೆವೆಯೂ ಬೆಂಗಳೂರಿನ ಕೆಲವೆಡೆ ಅಹಿತಕರ ಘಟನೆಗಳು ನಡೆದಿದೆ. ನಗರದ ವೈಯಾಲಿಕಾವಲ್ ಪ್ರದೇಶದಲ್ಲಿ ಎರಡು ಕೋಮುಗಳ ನಡುವೆ ನಡೆದ ಗುಂಪು ಘರ್ಷಣೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ. ವೈಯಾಲಿಕಾವಲ್ ಪ್ರಾರ್ಥನಾ ಮಂದಿರದ ಸಮೀಪ ಪಟಾಕಿ ಹಚ್ಚುವ ಸಂಬಂಧ ಈ ಗಲಭೆ ನಡೆದಿದೆ.

ರಾತ್ರಿಯಿಡೀ ಹಬ್ಬದ ಸಂಭ್ರಮ

ಬೆಂಗಳೂರು : ಟ್ವೆಂಟಿ 20 ವಿಶ್ವಕಪ್ ಪಂದ್ಯದಲ್ಲಿ ಭಾರತ ವಿಜಯ ಸಾಧಿಸಿತ್ತು ರಾಜ್ಯದ ಜನತೆಯನ್ನು ಖುಷಿಯ ಕಡಲಿನಲ್ಲಿ ತೇಲಿಸಿತು, ನಗರದ ಎಂಜಿ. ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ನಗರದ ವಿವಿಧೆಡೆಗಳಲ್ಲಿ ಜನ ಹುಚ್ಚೆದ್ದು ಕುಣಿದರು.

ಮಾಲ್ ಗಳು, ಪಬ್ಬುಗಳು ತಡ ರಾತ್ರಿಯವರೆಗೆ ತೆರೆದಿದ್ದವು. ಎಲ್ಲೆಲ್ಲೂ ಚಕ್ ದೇ ಇಂಡಿಯಾ ಎಂಬ ಘೋಷಣೆ, ಭಾರತ ಮಾತೆಗೆ ಜಯಕಾರದ ಉದ್ಗಾರ.ನಗರದ ವಿಜಯನಗರ, ಜಯನಗರ, ಕೋರ ಮಂಗಲ ಹೀಗೆ ಎಲ್ಲೆಡೆ ಪಟಾಕಿಗಳ ಸದ್ದು ಮುಗಿಲು ಮುಟ್ಟಿತ್ತು. ವಾಹನಗಳಲ್ಲಿ ರಾಷ್ಟ್ತ್ರಧ್ವಜವನ್ನು ಹಿಡಿದು ಓಡಾಡುತ್ತಿದ್ದ ಜನತೆಯ ಖುಷಿ ಸಾಮಾನ್ಯವಾಗಿತ್ತು.

ಈ ನಡುವೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ರಾಬಿನ್ ಉತ್ತಪ್ಪ ಹಾಗೂ ತಂಡದ ತರಬೇತುದಾರ ವೆಂಕಟೇಶ್ ಪ್ರಸಾದ್ ಅವರಿಗೆ ತಲಾ 5 ಲಕ್ಷರೂ ನಗದು ಬಹುಮಾನಗಳನ್ನು ಘೋಷಿಸಿದ್ದಾರೆ.
ಮತ್ತಷ್ಟು
ನೆರೆ ಪರಿಹಾರದಲ್ಲಿ ಕೇಂದ್ರದ ರಾಜಕೀಯ
ಇ- ಗವರ್ನನ್ಸ್‌ಗೆ ಕರ್ನಾಟಕ ಸರಕಾರ ಸಿದ್ದ
ಮೊಬೈಲ್‌ನಿಂದ ಶ್ರವಣ ದೋಷ: ತಜ್ಞರ ಎಚ್ಚರಿಕೆ
ಎಂಇಎಸ್‌ಗೆ ಕನ್ನಡ ಅಭ್ಯರ್ಥಿಗಳ ಸೆಡ್ಡು
ನಕ್ಸಲೀಯ ನಿಗ್ರಹಕ್ಕೆ ಕೇಂದ್ರ ಸಹಕಾರ ನೀಡಲಿ
ಬಿಜೆಪಿ ಸಖ್ಯ ಮುಸ್ಲಿಂರ ಅಕ್ರೋಶ : ಮೆರಾಜುದ್ದೀನ್