ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ನೈಸ್ ವಿರುದ್ಧ ಕುಮಾರಸ್ವಾಮಿ ಕಿಡಿ
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬ ಹಾಗೂ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ನಡುವಣ ಸಮರ ತೀವ್ರಗೊಂಡಿದೆ.

ಖಾಸಿಗೆ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಅಶೋಕ್ ಖೇಣಿ ಅವರು ದೇವೇಗೌಡ ಹಾಗೂ ಅವರ ಮಕ್ಕಳು ಸದ್ಯದಲ್ಲೇ ಜೈಲಿಗೆ ಹೋಗಲಿದ್ದಾರೆ ಎಂದು ಹೇಳಿರುವುದರ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ಆ ರೀತಿ ಹೇಳಿದವರ ಯೋಗ್ಯತೆ ಏನು ಎಂಬುದು ಸ್ವಲ್ಪ ದಿನಗಳಲ್ಲೇ ತಿಳಿಯುತ್ತದೆ. ಯಾರು ಜೈಲಿಗೆ ಹೋಗುತ್ತಾರೆ ಎಂಬುದೂ ತಿಳಿಯುತ್ತದೆ ಎಂದು ಹೇಳಿದ್ದಾರೆ.

ದೇವೇಗೌಡರ ಕುಟುಂಬವನ್ನು ಸುಳ್ಳು ಪತ್ತೆ ತಪಾಸಣೆಗೆ ಒಳಪಡಿಸಬೇಕು ಎಂದು ಖೇಣಿ ಹೇಳಿರುವ ಹಿನ್ನೆಲೆಯನ್ನು ನೈಸ್ ಮುಖ್ಯಸ್ಥ ಖೇಣಿಯವರನ್ನೇ ಸುಳ್ಳು ಪತ್ತೆ ತಪಾಸಣೆಗೆ ಒಳಪಡಿಸಬೇಕು ಎಂದು ಕಿಡಿ ಕಾರಿದ್ದಾರೆ.
ಮತ್ತಷ್ಟು
ಸಾರಾಯಿ, ಡಿಸಿಎಂ ಹೇಳಿಕೆಗೆ ಸಿಎಂ ಗರಂ
ಕ್ರಿಕೆಟ್ ವಿಜಯೋತ್ಸವ: ಗುಂಪು ಘರ್ಷಣೆ
ನೆರೆ ಪರಿಹಾರದಲ್ಲಿ ಕೇಂದ್ರದ ರಾಜಕೀಯ
ಇ- ಗವರ್ನನ್ಸ್‌ಗೆ ಕರ್ನಾಟಕ ಸರಕಾರ ಸಿದ್ದ
ಮೊಬೈಲ್‌ನಿಂದ ಶ್ರವಣ ದೋಷ: ತಜ್ಞರ ಎಚ್ಚರಿಕೆ
ಎಂಇಎಸ್‌ಗೆ ಕನ್ನಡ ಅಭ್ಯರ್ಥಿಗಳ ಸೆಡ್ಡು