ಕನ್ನಡ ಕಸ್ತೂರಿ ವಾಹಿನಿ ನಾಳೆಯಿಂದ ಆರಂಭವಾಗಲಿದೆ. ನಾಳೆ ಮುಂಜಾನೆ 5 ಗಂಟೆಯಿಂದ ತನ್ನ ವಾಹಿನಿಯ 24 ತಾಸುಗಳ ಪ್ರಸಾರವನ್ನು ಆರಂಭಿಸಲಿದೆ ಎಂದು ವಾಹಿನಿಯ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿ ಮತ್ತು ಮನರಂಜನೆಗೆ ಸಮಾಜ ಆದ್ಯತೆಯನ್ನು ನೀಡುವ ನಿಟ್ಟಿನಲ್ಲಿ ಕಸ್ತೂರಿ ಕಾರ್ಯನಿರ್ವಹಿಸಲಿದೆ. ಇದನ್ನು ಯಾವುದೇ ಕಾರಣಕ್ಕೂ ಪಕ್ಷದ ವಾಹಿನಿಯನ್ನಾಗಿಸಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಚಾನಲ್‌ಗಳು ರಾಜಕೀಯ ಅಸ್ತ್ತ್ರಗಳಾಗಿರುವುದು ಉತ್ತಮ ಬೆಳವಣಿಗೆಯಲ್ಲ. ಆದರೆ ಕನ್ನಡದಲ್ಲಿ ಇಂತಹ ಪ್ರಕ್ರಿಯೆ ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಶ್ರೇಷ್ಠ ಗುಣಮಟ್ಟದ ಪ್ರಸಾರ ಕಸ್ತೂರಿಯ ಉದ್ದೇಶ. ಕನ್ನಡಿಗರಿಗೆ ಕನ್ನಡದವರಿಂದಲೇ ಆಗಿರುವ ಚಾನಲ್ ನೀಡುವ ಉದ್ದೇಶ ನಮ್ಮದು ಎಂಬುದು ಅವರ ಅನಿಸಿಕೆ.
ಇತರ ಚಾನಲ್ ಗಳಂತೆ ಕ್ರೈಂ ಗೆ ಹೆಚ್ಚು ಆದ್ಯತೆ ನೀಡಲಾಗುವುದಿಲ್ಲ. ಮಾನವೀಯ ವರದಿಗಳನ್ನು ಒಳಗೊಂಡಿರುವ ಕಾರ್ಯಕ್ರಮಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.
ವಾರಕ್ಕೆ ಎರಡು ದಿನ ವಿಶೇಷ ಚಲನ ಚಿತ್ರ ಹಾಗೂ ನಾಗತಿಹಳ್ಳಿ ಹಾಗೂ ರಮೇಶ್ ಅರವಿಂದ್ ಟಾಕ್ ಶೋಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿವೆ.
|