ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸಚಿವರ ಮೇಲೆ ಗುಂಡಿನ ದಾಳಿ: ಬಳ್ಳಾರಿ ಉದ್ವಿಗ್ನ
ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಂಗಳವಾರ ತಡ ರಾತ್ರಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ಹಿಂಸಾಚಾರಕ್ಕೆ ತಿರುಗಿ ಬಳ್ಳಾರಿ ಉದ್ವಿಗ್ನಗೊಂಡಿದೆ.

ಸಚಿವ ಶ್ರೀರಾಮುಲು ಹಾಗೂ ವಿಧಾನಪರಿಷತ್ ಸದಸ್ಯ ಜನಾರ್ದನ ರೆಡ್ಡಿ ಅವರಿದ್ದ ವಾಹನದ ಮೇಲೆ ವ್ಯಕ್ತಿಯೊಬ್ಬ ಐದು ಸುತ್ತು ಗುಂಡು ಹಾರಿಸಿದ ಎನ್ನಲಾಗಿದೆ. ಶ್ರೀರಾಮುಲು ಹಾಗೂ ಜನಾರ್ದನರೆಡ್ಡಿಯವರು ಪ್ರಾಣಾಪಾಯದಿಂದ ಪಾರಾದರೂ ಎರಡು ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳು ಮುಗಿಲು ಮುಟ್ಟಿವೆ.

ಎರಡು ಪಕ್ಷಗಳು ಬಲಿಷ್ಠವಾಗಿರುವ ಬಳ್ಳಾರಿಯಲ್ಲಿ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜೆಡಿಎಸ್ ಕಾರ್ಯಕರ್ತರು ಬುಧವಾರ ರಸ್ತೆ ತಡೆ ನಡೆಸಿದ್ದಾರೆ. ಬಿಜೆಪಿಗೆ ಅಧಿಕಾರ ಹಸ್ತಾಂತರಗೊಂಡನಂತರ ತಾವು ಸಚಿವರಾಗಿರುವುದಿಲ್ಲ, ಸೆ. 30ರಂದೇ ಸಚಿವ ಹುದ್ದೆಗೆ ರಾಜಿನಾಮೆ ಸಲ್ಲಿಸುವುದಾಗಿ ಸಚಿವ ಶ್ರೀರಾಮುಲು ಪ್ರಕಟಿಸಿದ್ದಾರೆ.

ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರ ಸಂಬಂಧ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಬೆಳಗ್ಗೆಯಿಂದ ಶೀತಲ ಸಮರ ನಡೆದಿತ್ತು. ಅದು ರಾತ್ರಿವೇಳೆಗೆ ತಾರಕ್ಕೇರಿತ್ತು. ಉಾತ್ರಿ ವೇಳೆಗೆ ಅದು ಸ್ಪೋಟಗೊಂಡು ಜನಾರ್ದನರೆಡ್ಡಿ ಬೆಂಬಲಿಗರೊಬ್ಬರ ಮನೆಯ ಮೇಲೆ ಜೆಡಿಎಸ್ ಕಾರ್ಯಕರ್ತರು ದಾಳಿ ನಡೆಸಿದರು ಎನ್ನಲಾಗಿದೆ.

ಈ ವಿಷಯ ತಿಳಿದ ಸಚಿವ ಶ್ರಿರಾಮುಲು ಹಾಗೂ ರೆಡ್ಡಿ ಬರುತ್ತಿದ್ದ ವಾಹನದ ಮೇಲೆ ವ್ಯಕ್ತಿಯೊಬ್ಬ ಗುಂಡಿನದಾಳಿ ನಡೆಸಿದ್ದಾನೆ ಎನ್ನಲಾಗಿದೆ.
ಮತ್ತಷ್ಟು
ನೀನಾರಿಗಾದೆಯೋ ಎಲೆ ಮಾನವ !
ಚುನಾವಣೆ ; ಸಾರ್ವತ್ರಿಕ ರಜೆ
ಸುವಾಸನೆ ಬೀರಲಿರುವ ಕನ್ನಡ ಕಸ್ತೂರಿ ನಾಳೆಯಿಂದ ಆರಂಭ
ಮುಗಿಲು ಮುಟ್ಟಿದ ಚುನಾವಣಾ ಪ್ರಚಾರ
ಟ್ವೆಂಟಿ 20 : ಅಘೋಷಿತ ರಜೆ,ಘರ್ಷಣೆ
ನೈಸ್ ವಿರುದ್ಧ ಕುಮಾರಸ್ವಾಮಿ ಕಿಡಿ