ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಗೋಲ್ಡ್ ಕಾರ್ಡ್ ಖರೀದಿದಾರರಿಗೆ ಲಕ್ಕೀ ಡಿಪ್
ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ವೀಕ್ಷಣೆಗೆ ಆಗಮಿಸುವವರು ಕೊಳ್ಳುವ ಗೋಲ್ಡ್ ಕಾರ್ಡ್‌ಗಳಿಗೆ ಈ ಬಾರಿ ಲಕ್ಕಿ ಡ್ರಾಗಳನ್ನು ಏರ್ಪಡಿಸಲಾಗಿದೆ.

ಗೋಲ್ಡ್ ಕಾರ್ಡ್ ಕೊಂಡವರಿಗೆ ಅ. 20 ರಂದು ಸಂಜೆ 7ಕ್ಕೆ ಅರಮನೆ ಮೈದಾನದಲ್ಲಿ ಲಕ್ಕಿ ಡ್ರಾ ನಡೆಸಲಾಗುತ್ತದೆ. ಗೋಲ್ಡ್ ಕಾರ್ಡ್ಗಳನ್ನು ಪಡೆದವರು ಅ. 12ರಿಂದ 21ರವರೆಗೆ ಅರಮನೆ, ಮೃಗಾಲಯ, ರಂಗನತಿಟ್ಟು ಪಕ್ಷಿಧಾಮ, ನಾಗರಹೊಳೆ ಅಭಯಾರಣ್ಯ, ಕೃಷ್ಣರಾಜಸಾಗರ, ದಸರಾ ವಸ್ತು ಪ್ರದರ್ಶನ ಚಾಮುಂಡಿಬೆಟ್ಟದಲ್ಲಿ ದೇವಾಲಯಕ್ಕೆ ವಿಶೇಷ ಪ್ರವೇಶಾವಕಾಶ ಕಲ್ಪಿಸಲಾಗಿದೆ.

ಅರಮನೆ ಆವರಣದ ಸಂಗೀತ ಕಚೇರಿ, ಜಗನ್ಮೌಹಿನಿ ಪ್ಯಾಲೆಸ್, ನೃತ್ಯ ಕಾರ್ಯಕ್ರಮ ಮುಂತಾದ ಸ್ಥಳಗಳಿಗೆ ಶೇ. 50ರಷ್ಟು ರಿಯಾಯಿತಿ ದರದಲ್ಲಿ ಪ್ರವೇಶ ಅವಕಾಶ ಕಲ್ಪಿಸಲಾಗಿದೆ.

ದಸರಾ ಗೋಲ್ಡ್ ಕಾರ್ಡ್ಗೆ ಆರು ಸಾವಿರ ರೂ. ಬೆಲೆ ನಿಗದಿ ಪಡಿಸಲಾಗಿದೆ.

ಗೋಲ್ಡ್ ಕಾರ್ಡ್‌ಗಳನ್ನು ಜಿಲ್ಲಾಧಿಕಾರಿಗಳು ಕಚೇರಿ ಅಥವಾ ಹೊಸ ಸಯಾಜಿರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿಗಳ ಕಚೇರಿಯಲ್ಲಿ ಖರೀದಿಸಬಹುದಾಗಿದೆ.
ಮತ್ತಷ್ಟು
ಸಚಿವರ ಮೇಲೆ ಗುಂಡಿನ ದಾಳಿ: ಬಳ್ಳಾರಿ ಉದ್ವಿಗ್ನ
ನೀನಾರಿಗಾದೆಯೋ ಎಲೆ ಮಾನವ !
ಚುನಾವಣೆ ; ಸಾರ್ವತ್ರಿಕ ರಜೆ
ಸುವಾಸನೆ ಬೀರಲಿರುವ ಕನ್ನಡ ಕಸ್ತೂರಿ ನಾಳೆಯಿಂದ ಆರಂಭ
ಮುಗಿಲು ಮುಟ್ಟಿದ ಚುನಾವಣಾ ಪ್ರಚಾರ
ಟ್ವೆಂಟಿ 20 : ಅಘೋಷಿತ ರಜೆ,ಘರ್ಷಣೆ