ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕಿರುಕುಳವೇ ಆತ್ಮಹತ್ಯೆಗೆ ಕಾರಣ
ಭಾರತೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿ ಅಜಯ ಶ್ರೀಚಂದ್ರ (21) ಆತ್ಮಹತ್ಯೆಗೆ ಶರಣಾಗಲು ಆತನಿಗೆ ಮಾರ್ಗದರ್ಶನ ನೀಡುತ್ತಿದ್ದ ಗುರುಗಳ ಕಿರುಕುಳವೇ ಕಾರಣ ಎಂದು ಅಜಯನ ತಂದೆ ರವೀಂದ್ರ ಕುಮಾರ್ ಆರೋಪಿಸಿದ್ದಾರೆ.

ತಮ್ಮ ಮಗನ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸದಾಶಿವನಗರ ಪೊಲೀಸರಿಗೆ, ಉಪ ಪೊಲೀಸ್ ಆಯುಕ್ತರಿಗೆ, ಡಿಜಿಪಿಗೆ ಮಾನವ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

ಇತರ ವಿದ್ಯಾರ್ಥಿಗಳು ಸಲ್ಲಿಸಿದ ಪ್ರಬಂಧಗಳಿಗಿಚಿತ ತಮ್ಮ ಮಗನ ಪ್ರಬಂಧ ಉತ್ತಮವಾಗಿದ್ದರೂ ವಿನಾ ಕಾರಣ ಅದನ್ನು ಗೈಡ್‌ಗಳು ತಿರಸ್ಕರಿಸಿದ್ದಾರೆ. ಈ ವಿಷಯದಲ್ಲಿ ತನ್ನ ನೋವನ್ನು ತಮ್ಮ ಬಳಿ ತಮ್ಮ ಪುತ್ರ ತೋಡಿಕೊಂಡಿದ್ದ ಎಂದೂ ಸಹ ಹೇಳಿದ್ದಾರೆ.

ತನ್ನ ಸಾವಿಗೆ ಕಾರಣರಾದವರ ಹೆಸರನ್ನು ಒಂದು ಪತ್ರದಲ್ಲಿ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾನೆ ಅವನ ಸ್ನೇಹಿತರು ತಮಗೆ ತಿಳಿಸಿದ್ದಾರೆ. ಆದರೆ ಆ ಪತ್ರ ತಮಗೆ ದೊರೆಯಲಿಲ್ಲ ಎಂದು ತಿಳಿಸಿದ್ದಾರೆ.

ಇದರ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತೇವೆ ಎಂದಷ್ಟೇ ಹೇಳಿದ್ದಾರೆ.
ಮತ್ತಷ್ಟು
ಬೆಂಗಳೂರು ನಗರಕ್ಕೆ ಎ-1 ಸಿಟಿ ಮಾನ್ಯತೆ:
ಗೋಲ್ಡ್ ಕಾರ್ಡ್ ಖರೀದಿದಾರರಿಗೆ ಲಕ್ಕೀ ಡಿಪ್
ಸಚಿವರ ಮೇಲೆ ಗುಂಡಿನ ದಾಳಿ: ಬಳ್ಳಾರಿ ಉದ್ವಿಗ್ನ
ನೀನಾರಿಗಾದೆಯೋ ಎಲೆ ಮಾನವ !
ಚುನಾವಣೆ ; ಸಾರ್ವತ್ರಿಕ ರಜೆ
ಸುವಾಸನೆ ಬೀರಲಿರುವ ಕನ್ನಡ ಕಸ್ತೂರಿ ನಾಳೆಯಿಂದ ಆರಂಭ