ನೆರೆ ಪರಿಹಾರ ನೀಡಿಕೆಯಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆಯಿಂದ ವರ್ತಿಸುತ್ತಿದೆ ಎಂಬುದು ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಆರೋಪ.
ಆದರೆ ಕೇಂದ್ರದಿಂದ ಬಂದ ಆರ್ಥಿಕ ನೆರವನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಬಳಸಿಕೊಂಡಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ.
ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಸದಸ್ಯ ವೀರಕುಮಾರ್ ಅವರಿಗೆ ಸಚಿವ ಜಗದೀಶ್ ಶೆಟ್ಟರ್ ನೀಡಿರುವ ಲಿಖಿತ ಹೇಳಿಕೆಯಲ್ಲಿ ಕೇಂದ್ರದಿಂದ ಬಂದ 221 ಕೊಟಿ ರೂ. ನೆರವನ್ನು ಬಳಸಿಕೊಳ್ಳುವಲ್ಲಿ ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ.
ಕೇಂದ್ರದ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ 2004-05ರಲ್ಲಿ 113.98 ಕೊಟಿ ರೂ., 2005-06ರಲ್ಲಿ 86 ಕೊಟಿ ರೂ. 200607ರಲ್ಲಿ ಕೊಟಿ ರೂ. ರಾಷ್ಟ್ತ್ರೀಯ ವಿಪತ್ತು ಪರಿಹಾರ ನಿಧಿಯಿಂದ 2004-05 ರಲ್ಲಿ 384.97 ಕೋಟಿರೂ. 2005-06ರಲ್ಲಿ 358.85 ಕೊಟಿ ರೂ. 2006-07ರಲ್ಲಿ 63.62 ಕೋಟಿರೂ. ಸ್ಬೆರಿದಂತೆ ಒಟ್ಟು 1075 ಕೋಟಿ ರೂ. ರಾಜ್ಯಕ್ಕೆ ಬಂದಿದೆ.
ಬರ ಪರಿಹಾರಕ್ಕೆ ಬಮದ 227 ಕೋಟಿ ರೂ.ಗಳಲಲಿ 90.58 ಕೋಟಿ ರೂ. ಪ್ರವಾಹ ಪರಿಹಾರಕ್ಕೆ ಬಂದ 217 ಕೋಟಿ ರು. 185.51 ಕೊಟಿ ರೂ. ಮಾತ್ರ ಬಳಸಿಕೊಂಡಿದ್ದು, ಉಳಿದ 221 ಕೋಟಿ ರೂ.ಗಳನ್ನು ಈ ವರೆಗೆ ಬಳಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
|