ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಅಧಿಕಾರ ಹಸ್ತಾಂತರ ದಿಢೀರ್ ಸ್ಥಗಿತ
ಬಿ. ಶ್ರೀರಾಮುಲುರಿಂದ ಕುಮಾರಸ್ವಾಮಿ ವಿರುದ್ಧ ದೂರು
NRBNRB
ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಪ್ರವಾಸೋದ್ಯಮ ಖಾತೆ ಸಚಿವ ಬಿ. ಶ್ರೀರಾಮುಲು ಕೊಲೆ ಯತ್ನ ಆಪಾದನೆ ಮಾಡಿ ಪೊಲೀಸರಿಗೆ ಸಲ್ಲಿಸಿರುವ ದೂರಿನಿಂದ ರಾಜ್ಯದ ರಾಜಕೀಯ ಪರಿಸ್ಥಿತಿ ಕುತೂಹಲಕಾರಿ ರೂಪ ಪಡೆದಿದ್ದು. ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ದೇವೆಗೌಡ ಮತ್ತು ಬಿಜೆಪಿ ಅದ್ಯಕ್ಷ ರಾಜ್‌ನಾಥ್ ಸಿಂಗ್ ಅವರ ನಡುವಿನ ಮಾತುಕತೆ ರದ್ದಾಗಿದೆ. ಬುಧವಾರ ಮಾತುಕತೆ ನಡೆಸಲು ದೆಹಲಿಗೆ ತೆರಳಿದ್ದ ದೇವೆಗೌಡ, ಬೆಂಗಳೂರಿಗೆ ಮರಳಿದ್ದಾರೆ.

ಕುಮಾರಸ್ವಾಮಿ ವಿರುದ್ಧ ದೂರು

ತಕ್ಷಣದ ರಾಜಕೀಯ ಬೆಳವಣಿಗೆಗೆ ಬಳ್ಳಾರಿಯ ಕೌಲ್ ಬಜಾರ್ ಪೋಲಿಸ್ ಠಾಣೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಪ್ರವಾಸೋದ್ಯಮ ಖಾತೆ ಸಚಿವ ಬಿ ಶ್ರೀರಾಮುಲು ಕೊಲೆ ಯತ್ನ ಆರೋಪದ ದೂರು ದಾಖಲಿಸಿರುವುದು ಕಾರಣವಾಗಿದೆ.

ಶ್ರೀರಾಮುಲು ಸಲ್ಲಿಸಿರುವ ದೂರಿನಲ್ಲಿ ರಾಜಕೀಯ ಕಾರ್ಯದರ್ಶಿ ಎನ್ ಸೂರ್ಯನಾರಾಯಣ ರೆಡ್ಡಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಸಂದೀಪ್ ಪಾಟೀಲ್ ತಮ್ಮ ಕೊಲೆ ಯತ್ನದಲ್ಲಿ ಭಾಗಿಯಾಗಿರುವವರು ಎಂದು ಆರೋಪಿಸಲಾಗಿದೆ.

ಕುಮಾರಸ್ವಾಮಿ ಎಚ್ಚರಿಕೆ

ತಮ್ಮ ವಿರುದ್ಧ ದೂರು ದಾಖಲಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕುಮಾರಸ್ವಾಮಿ ಅವರು, ಅಧಿಕಾರದಲ್ಲಿ ಇರುವ ಬಯಕೆ ಬಿಜೆಪಿಗೆ ಇದ್ದರೆ ಇಂತಹ ಘಟನೆಗಳಿಗೆ ಅವಕಾಶ ನೀಡಬಾರದು. “ ನನ್ನದೇ ಸಚಿವ ಸಂಪುಟದಲ್ಲಿ ಇರುವ ಓರ್ವ ಸಚಿವ ಕೊಲೆ ಯತ್ನವನ್ನು ನನ್ನ ಮೇಲೆ ಹಾಕಿ ಪೊಲೀಸರಿಗೆ ದೂರು ನೀಡುವುದು ಮತ್ತೊರ್ವ ಬಿಜೆಪಿ ನಾಯಕ ಬಳ್ಳಾರಿಗೆ ನಾನು ಕಾಲಿಡಲು ಬಿಡುವುದಿಲ್ಲ ಎಂದು ಸವಾಲು ಹಾಕುವುದು ನೋಡಿದರೆ ಈಗಲೇ ಇವರ ವರ್ತನೆ ಯಾವ ರೀತಿ ಇದೆ. ಅಧಿಕಾರ ದೊರೆತ ನಂತರ ಇವರ ವರ್ತನೆ ಯಾವ ರೀತಿ ಇರುತ್ತದೆ ಎಂಬುದನ್ನು ಊಹಿಸಿಕೊಳ್ಳಬಹುದು” ಎಂದು ಹೇಳಿದ್ದಾರೆ.

ಸಹನೆ ನನ್ನ ಅತಿದೊಡ್ಡ ಶಕ್ತಿ ಎಂದು ಹೇಳಿದ ಅವರು, ಇಂತಹ ಘಟನೆ, ಇರಿಸು ಮುರುಸುಗಳನ್ನು ಕಳೆದ 20 ತಿಂಗಳುಗಳಿಂದ ಅನುಭವಿಸುತ್ತ ಬಂದಿದ್ದೆನೆ. ಇದೇ ರೀತಿಯ ಘಟನೆಗಳು ಮುಂದುವರಿದರೆ ಸಹ ಪಕ್ಷ ಅಧಿಕಾರದಲ್ಲಿ ಮುಂದುವರಿಯುವುದು ಕಷ್ಟ. ಎಂದು ಹೇಳಿದ್ದಲ್ಲದೇ ಬಿಜೆಪಿಗೆ ಅಧಿಕಾರವನ್ನು ಹಸ್ತಾಂತರಿಸಲಾಗುವುದರಲ್ಲಿ ಸಂಶಯ ಇಲ್ಲ ಎಂದು ಪುನರುಚ್ಚಿಸಿದ್ದಾರೆ.
ಮತ್ತಷ್ಟು
ರಾಮದೇವ ಬಾಬಾ ಸಮಾವೇಶ ಉದ್ಘಾಟನೆ
ನವದೆಹಲಿಯಲ್ಲಿ ಅ. 27ರಂದು ಲಿಂಗಾಯಿತ ಸಮ್ಮೇಳನ
ಕೇಂದ್ರ ನೆರವನ್ನು ಬಳಸಿಕೊಳ್ಳದ ರಾಜ್ಯ ಸರ್ಕಾರ
ಕಿರುಕುಳವೇ ಆತ್ಮಹತ್ಯೆಗೆ ಕಾರಣ
ಬೆಂಗಳೂರು ನಗರಕ್ಕೆ ಎ-1 ಸಿಟಿ ಮಾನ್ಯತೆ:
ಗೋಲ್ಡ್ ಕಾರ್ಡ್ ಖರೀದಿದಾರರಿಗೆ ಲಕ್ಕೀ ಡಿಪ್