ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕ್ರಿಕೆಟ್ ಪಂದ್ಯ : ಭಾರೀ ಭದ್ರತೆ, ರಸ್ತೆ ಸಂಚಾರಗಳಲ್ಲಿ ಮಾರ್ಪಾಡು
ಶನಿವಾರ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಆಸ್ಟ್ತ್ರೇಲಿಯಾ ಪಂದ್ಯಕ್ಕೆ ಭಾರೀ ಭದ್ರತೆ ಒದಗಿಸಲಾಗಿದೆ. ಪಂದ್ಯದ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಉಗ್ರಗಾಮಿ ಚಟುವಟಿಕೆ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ಬಂದೋಬಸ್ತ್ ಕ್ರಮ ಕೈಗೊಂಡಿದ್ದಾರೆ.

ಶನಿವಾರ ನಡೆಯಲಿರುವ ಪಂದ್ಯಕ್ಕೆ ಡಿಸಿಪಿ ನೇತೃತ್ವದ ಸುಮಾರು 2000 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಎಂದು ನಗರ ಪೊಲೀಸ್ ಆಯುಕ್ತ ಎನ್.ಅಚ್ಯುತ ರಾವ್ ತಿಳಿಸಿದ್ದಾರೆ. ಪಂದ್ಯ ನಡೆಯುವ ದಿನ ಬೆಳಗ್ಗೆ 10ರಿಂದ ನಗರದ ಪ್ರಮುಖ ಕಡೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲ ಎಂದು ಅವರು ತಿಳಿಸಿದ್ದಾರೆ.

ವಿಶೇಷ ಸ್ವಾಗತ : ಈ ನಡುವೆ ಪ್ರವಾಸೀ ಆಸ್ತ್ತ್ರೇಲಿಯಾ ತಂಡ ನಗರಕ್ಕೆ ಆಗಮಿಸಿದ್ದು ನಗರದ ಹೋಟೆಲ್ ಗ್ರಾಂಡ್ ಅಶೋಕಾದಲ್ಲಿ ಕ್ರಿಕೆಟಿಗರಿಗೆ ವಿಶೇಷ ಆತಿಥ್ಯ ನೀಡಲಾಗಿದೆ.

ಪ್ರವಾಸೀ ತಂಡದ ಸುರಕ್ಷಾ ಹಿನ್ನೆಲೆಯಲ್ಲಿ ಆಟಗಾರರಿಗೆ ಅನುಕೂಲವಾಗುವಂತೆ ಒಂದೇ ಮಹಡಿಯಲ್ಲಿ ಕೊಠಡಿ ಸೌಲಭ್ಯ ಕಲ್ಪಿಸಲಾಗಿದೆ. ಭಾರತೀಯ ಆಟಗಾರರು ಇಂದು ನಗರಕ್ಕೆ ಆಗಮಿಸುವ ನೀರೀಕ್ಷೆಯಿದೆ.
ಮತ್ತಷ್ಟು
ಅಧಿಕಾರ ಹಸ್ತಾಂತರ ದಿಡಿರ್ ಸ್ಥಗಿತ
ರಾಮದೇವ ಬಾಬಾ ಸಮಾವೇಶ ಉದ್ಘಾಟನೆ
ನವದೆಹಲಿಯಲ್ಲಿ ಅ. 27ರಂದು ಲಿಂಗಾಯಿತ ಸಮ್ಮೇಳನ
ಕೇಂದ್ರ ನೆರವನ್ನು ಬಳಸಿಕೊಳ್ಳದ ರಾಜ್ಯ ಸರ್ಕಾರ
ಕಿರುಕುಳವೇ ಆತ್ಮಹತ್ಯೆಗೆ ಕಾರಣ
ಬೆಂಗಳೂರು ನಗರಕ್ಕೆ ಎ-1 ಸಿಟಿ ಮಾನ್ಯತೆ: