ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಮಧ್ಯಂತರ ಚುನಾವಣೆಗೆ ಬಿಜೆಪಿ ಸಿದ್ದ : ಸದಾನಂದಗೌಡ
ಬಳ್ಳಾರಿ ಹಾಗೂ ಬೆಂಗಳೂರಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಎಲ್ಲ ಮಾಹಿತಿಯನ್ನು ಪಡೆದನಂತರ ತಾವು ಪ್ರತಿಕ್ರಿಯಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ ಗುರುವಾರ ಸ್ಪಷ್ಟಪಡಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳನ್ನು ನೆಪವಾಗಿಟ್ಟು ಅಧಿಕಾರ ಹಸ್ತಾಂತರ ಸಾಧ್ಯವಾಗದೆ ಮಧ್ಯಂತರ ಚುನಾವಣೆ ಎದುರಾದರೂ ತಮ್ಮ ಪಕ್ಷ ಹೆದರುವುದಿಲ್ಲ ಎಂದು ಹೇಳಿದ್ದಾರೆ.

ಯಾವಾಗಲೂ ತಮ್ಮ ಪಕ್ಷ ಗ್ರಾಮ ಮಟ್ಟದಿಂದ ರಾಷ್ಟ್ತ್ರಮಟ್ಟದ ವರೆಗೆ ಚುನಾವಣೆ ಎದುರಿಸಲು ಸಜ್ಜಾಗಿರುತ್ತದೆ ಎಂದು ತಿಳಿಸಿದ್ದಾರೆ. ಅಕ್ಟೋಬರ್ 3ರ ನಂತರ ಅಧಿಕಾರ ಹಸ್ತಾಂತರಕ್ಕೆ ತೊಂದರೆ ಎದುರಾದರೆ ಮುಂದಿನ ಕ್ರಮದ ಬಗ್ಗೆ ತಮ್ಮ ಪಕ್ಷ ನಂತರ ಚಿಂತನೆ ನಡೆಸುತ್ತದೆ ಎಂದು ಹೇಳಿದ್ದಾರೆ.

ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ತಮ್ಮ ಪಕ್ಷದಿಂದ ಮುಖ್ಯಮಂತ್ರಿಯಾಗುತ್ತಾರೆ ಎಂದು ತಾವು ಹಲವಾರು ಬಾರಿ ಹೇಳಿದ್ದಾಗಿ ಅವರು ತಿಳಿಸಿದ್ದಾರೆ.

ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದಾಗ ಗೌರವಯುತ ಒಪ್ಪಂದವಾಗಿದೆ, ಅದೇ ರೀತಿ ಈ 19 ತಿಂಗಳು ಬಿಜೆಪಿ ಗೌರವಯುತವಾಗಿ ನಡೆದುಕೊಂಡಿದೆ,

ಹಾಗೇ ಅಧಿಕಾರ ಹಸ್ತಾಂತರ ಗೌರವಯುತವಾಗೇ ನಡೆಯುತ್ತದೆ ಎಂಬ ವಿಶ್ವಾಸ ತಮಗಿದೆ. ಹಾಗಾಗದಿದ್ದರೆ ಮುಂದೆ ನೋಡೋಣ ಎಂಬ ಮಾತನ್ನಾಡಿದ್ದಾರೆ.
ಮತ್ತಷ್ಟು
ಪಕ್ಷದ ಮುಖಂಡರನ್ನು ಹದ್ದುಬಸ್ತಿನಲ್ಲಿಡಿಃ ಗೌಡರ ಎಚ್ಚರಿಕೆ
ಬಿಎಂಐಸಿ ಟೆಂಡರ್ ಪ್ರಕ್ರಿಯೆಗೆ ತಡೆಯಾಜ್ಞೆ
ಕ್ರಿಕೆಟ್ ಪಂದ್ಯ : ಭಾರೀ ಭದ್ರತೆ, ರಸ್ತೆ ಸಂಚಾರಗಳಲ್ಲಿ ಮಾರ್ಪಾಡು
ಅಧಿಕಾರ ಹಸ್ತಾಂತರ ದಿಢೀರ್ ಸ್ಥಗಿತ
ರಾಮದೇವ ಬಾಬಾ ಸಮಾವೇಶ ಉದ್ಘಾಟನೆ
ನವದೆಹಲಿಯಲ್ಲಿ ಅ. 27ರಂದು ಲಿಂಗಾಯಿತ ಸಮ್ಮೇಳನ