ರಾಜ್ಯದ ಪೇಟೆ-ಪಟ್ಟಣಗಳು ಪುರಸಭೆ, ನಗರಸಭೆಗಳ ಚುನಾವಣೆ ಪ್ರಚಾರದ ಕಾವಿನಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಯಡಿಯೂರಪ್ಪ, ಅಲ್ಲಿ-ಇಲ್ಲಿ ತಮ್ಮ ರಾಜಕೀಯ ಎದುರಾಳಿಗಳನ್ನು ಟೀಕಿಸುವಾಗ ಬಿಜೆಪಿ, ಜೆಡಿಎಸ್ ವಿರುದ್ಧ ಮಾತಾಡಿರಬಹುದು. ಆದರೆ ಆ ಟೀಕೆಯನ್ನು ಅಧಿಕಾರ ಹಸ್ತಾಂತರದ ಪ್ರಕ್ರಿಯೆಗೆ ಗಂಟು ಹಾಕಿಲ್ಲ. ಜೆಡಿಎಸ್ ಹಾಗೂ ಬಿಜೆಪಿ ಸಮ್ಮಿಶ್ರ ಸರ್ಕಾರ ರಚಿಸುವ ಸಂದರ್ಭದಲ್ಲಿ ಒಳ ಒಪ್ಪಂದ ಕುದುರಿದಂತೆ ಸ್ಥಳೀಯ ಸಂಸ್ಥೆಗಳು ಚುನಾವಣಾ ಪ್ರಚಾರದಲ್ಲಿ ಅಂಗ ಪಕ್ಷಗಳ ವಿರುದ್ಧ ವಾಗ್ದಾಳಿಗೆ ಪರಸ್ಪರ ಒಪ್ಪಂದ ಕುದುರಿರಬಹುದೇನೋ ಎಂಬ ಸಂಶಯ ಜನರನ್ನು ಕಾಡುತ್ತಿದೆ.
ಬಳ್ಳಾರಿಯ ವಿದ್ಯಮಾನಗಳ ಬಗ್ಗೆ ಕೆಂಡಾಮಂಡಲವಾದ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಅಧಿಕಾರದ ಕೊನೆ ದಿನಗಳಲ್ಲಿ ಎಂದು ಹೇಳುವ ಮೂಲಕ ಅಧಿಕಾರ ಹಸ್ತಾಂತರ ಖಚಿತ ಎಂಬ ಅಭಿಪ್ರಾಯವನ್ನು ಹೇಳದೆ ಬಹಿರಂಗಗೊಳಿಸಿದ್ದಾರೆ. ಆದರೂ ಅಕ್ಟೋಬರ್ 3 ಅಥವಾ 5ರಂದು ಅಧಿಕಾರ ಹಸ್ತಾಂತರ ನಡೆಯಲಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಅನಂತರ ಏನು ಬೇಕಾದರೂ ಆಗಬಹುದೆಂಬ ಜೆಡಿಎಸ್ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿ ಬಿಜೆಪಿ ನಾಯಕರಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರ ಸಮಕ್ಷಮದಲ್ಲಿ ವಿಚಾರ ವಿನಿಮಯ ಮಾಡುವಂಥ ನಾಯಕರು ರಾಜ್ಯದಲ್ಲಿ ಯಾರೂ ಇಲ್ಲ.
|