ವಿಜ್ಞಾನ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ನೀಡಲಾಗುವ ಈ ವರ್ಷದ ಶಾಂತಿ ಸ್ವರೂಪ ಭಟ್ನಾಗರ್ ಪ್ರಶಸ್ತಿಗೆ ಆಯ್ಕೆ ಆದ 11 ವಿಜ್ಞಾನಿಗಳ ಪೈಕಿ ನಗರದ ನಾಲ್ವರು ವಿಜ್ಞಾನಿಗಳಿದ್ದಾರೆ. ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿ (ಸಿಎಸ್ಐಆರ್) ಮಹಾ ನಿರ್ದೇಶಕ ಟಿ. ಉಮಾಸ್ವಾಮಿ ಪ್ರಶಸ್ತಿ ಪಡೆದವರು ಪಟ್ಟಿಯನು ಪ್ರಕಟಿಸಿದ್ದಾರೆ.
ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯ ಡಾ.ನಾರಾಯಣ ಸ್ವಾಮಿ ಶ್ರೀನಿವಾಸ್ ಅವರಿಗೆ ಜೀವ ವಿಜ್ಞಾನ ವಿಭಾಗದ ಪ್ರಶಸ್ತಿ ಲಭಿಸಿದೆ.
ಗ್ಪಣಿತ ಮತ್ತು ವೈದ್ಯಕೀಯ ಶಾಸ್ತ್ತ್ರ ವಿಭಾಗದಲ್ಲಿ , ಡಾ.ಬಿ.ವಿ. ರಾಜಾರಾಮಭಟ್ ಹಾಗೂ ಡಾ. ಪುಂಡಿ ನರಸಿಂಹನ್ ರಂಗರಾಜನ್ ಅವರಿಗೆ, ಎಂಜಿನಿಯರಿಂಗ್ ಸೈನ್ಸ್ ವಿಭಾಗದಲ್ಲಿ ಬೆಂಗಳೂರಿನ ಜವಾಹರ್‌ಲಾಲ್ ನೆಹರು ಸಂಶೋಧನಾಲಯದ ಡಾ. ರಾಮಗೋವಿಂದರಾಜನ್ ಅವರಿಗೆ ಈ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿಯು ಪ್ರಮಾಣಪತ್ರ ಹಾಗೂ 2 ಲಕ್ಷ ರೂ. ನಗದನ್ನು ಒಳಗೊಂಡಿದೆ.
|