ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ನಾಳೆ ಸ್ಥಳೀಯ ಸಂಸ್ಥೆಗಳ ಚುನಾವಣೆ
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಾಳೆ (ಸೆ. 28ರಂದು) ನಡೆಯಲಿದ್ದು, ರಾಜಕೀಯ ವಾಮ ತಂತ್ರಗಾರಿಕೆ ಮತ್ತು ವ್ಯೂಹಗಳನ್ನು ರಚಿಸುವುದರಲ್ಲಿ ರಾಜಕೀಯ ಮುಖಂಡರು ನಿರತರಾಗಿದ್ದಾರೆ.

ಶುಕ್ರವಾರ 209 ನಗರ ಸ್ಥಳೀಯ ಸಂಸ್ಥೆಗಳ 5012 ಸ್ಥಾನಗಳಿಗೆ ಮತದಾನ ನಡೆಯಲಿದೆ.

ಸುಮಾರು 25 ಸಾವಿರ ಮಂದಿ ಚುನಾವಣಾ ಕಣದಲ್ಲಿದ್ದಾರೆ. ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷಗಳಿಗೆ ಈ ಚುನಾವಣೆ ಅಗ್ನಿ ಪರೀಕ್ಷೆ ಆಗಲಿದೆ. ಮತಗಳನ್ನು ಸೆಳೆದುಕೊಳ್ಳಲು ಹಣ, ಸೀರೆ ಹಾಗೂ ಮದ್ಯ ವಿತರಣೆಯೂ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ನಗರ ಪ್ರದೇಶಗಳಲ್ಲಿ ಕೊಳೆಗೇರಿ ಮತಗಳು ಅತ್ಯಂತ ನಿರ್ಣಾಯಕವಾಗಲಿವೆ. ಎಲ್ಲಾ ಪಕ್ಷಗಳು ಈ ಮತಗಳ ಮೇಲೆಯೇ ಕಣ್ಣಿಟ್ಟಿವೆ. ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು, ಪ್ಲಾಂಟೇಶನ್, ಮೋಟಾರು ಸಾರಿಗೆ ಸಂಸ್ಥೆಗಳು, ಬೀಡಿ ಉದ್ದಿಮೆ, ಇತರೆ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ವೇತನ ಸಹಿತ ರಜೆ ಅಥವಾ ಮತ ಚಲಾಯಿಸಲು ಅನುಕೂಲವಾಗುವಂತೆ ಮೂರು ಗಂಟೆಗಳ ಅನುಮತಿ ನೀಡಬೇಕು ಎಮದು ರಾಜ್ಯ ಚುನಾವಣಾ ಆಯೊಗ ಸೂಚಿಸಿದೆ.

ಚುನಾವಣೆ ನಡೆಯುವ ಕ್ವ್ಷತ್ರಗಳಲ್ಲಿ ಸೆ. 27 ಬೆಳಗ್ಗೆ 7 ರಿಂದ 30ರ ಮಧ್ಯ ರಾತ್ರಿ ವರೆಗೆ ಮಧ್ಯ ಮಾರಾಟ ನಿಷೇಧಿಸಲಾಗಿದೆ. ಮದ್ಯದಂಗಡಿಗಳು, ಬಾರ್ ಅಂಡ್ ರೆಸ್ಟೋರೆಂಟ್, ಕ್ಲಬ್‌ಗಳನ್ನು ಮುಚ್ಚುವಂತೆಯೂ ಆದೇಶ ಹೊರಡಿಸಲಾಗಿದೆ.
ಮತ್ತಷ್ಟು
ಶಾಂತಿ ಸ್ವರೂಪ ಭಟ್ನಾಗರ್ ಪ್ರಶಸ್ತಿಗೆ ಆಯ್ಕೆ
ಚುನಾವಣಾ ಪ್ರಚಾರ: ವಾಗ್ದಾಳಿಗೆ ಪರಸ್ಪರ ಒಪ್ಪಂದ
ಗಣಿ ದೊರೆಗಳಿಂದ ಬಿಜೆಪಿಗೆ ಗಂಡಾಂತರ
ಮಧ್ಯಂತರ ಚುನಾವಣೆಗೆ ಬಿಜೆಪಿ ಸಿದ್ದ : ಸದಾನಂದಗೌಡ
ಪಕ್ಷದ ಮುಖಂಡರನ್ನು ಹದ್ದುಬಸ್ತಿನಲ್ಲಿಡಿಃ ಗೌಡರ ಎಚ್ಚರಿಕೆ
ಬಿಎಂಐಸಿ ಟೆಂಡರ್ ಪ್ರಕ್ರಿಯೆಗೆ ತಡೆಯಾಜ್ಞೆ