ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕಸಾಪ ಸಿಬ್ಬಂದಿ ಅನಿರ್ದಿಷ್ಟಾವಧಿ ಧರಣಿ
ನಿವೃತ್ತಿ ವೇತನ ಸ್ಬೆರಿದಂತೆ ಹಲವು ಉದ್ಯೋಗ ಸೌಲಭ್ಯಗಳನ್ನು ತಮಗೆ ನ್ಯಾಯಯುತವಾಗಿ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ, ಕನ್ನಡ ಸಾಹಿತ್ಯ ಪರಿಷತ್ ಸಿಬ್ಬಂದಿ ಸೆ. 28 ರಿಂದ ಅನಿರ್ದಿಷ್ಠಾವಧಿ ಧರಣಿ ಆರಂಭಿಸಲಿದ್ದಾರೆ.

ಸುದೀರ್ಘ ಸಾಹಿತ್ಯಿಕ ಪರಂಪರೆ ಇರುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕಸಾಪನಲ್ಲಿ ನೌಕರರ ಅವಸ್ಥೆಯ ಬಗ್ಗೆ ಯಾರೂ ಗಮನಿಸುವವರಿಲ್ಲ ಎಂಬುದು ಪರಿಷತ್ತಿನ ನೌಕರರ ಅಳಲು.

ಡಾ. ಸಾ.ಶಿ ಮರುಳಯ್ಯ ಅವರು ಮಾಡಿದ ಪ್ರಯತ್ನದಿಂದ 1996ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ. ದೇವೇಗೌಡರು ಕನ್ನಡ ಸಾಹಿತ್ಯ ಪರಿಷತ್ತಿನ ನೌಕರರ ವೇತನಕ್ಕೆ ಅನುದಾನ ಸಂಹಿತೆಯಡಿ ಸಂಬಳ ನಿಡಲು ಆದೇಶ ನೀಡಿದ್ದರು.

ಅಂದಿನಿಂದ ನೌಕರರ ವೇತನದ ಅನುದಾನ ಸರ್ಕಾರದಿಂದ ಲಭಿಸುತ್ತಿದೆ. ಸರ್ಕಾರದ ಆದೇಶದಲ್ಲಿ ಸೂಚಿಸಿರುವ ಷರತ್ತುಗಳ ಪ್ರಕಾರ, ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸರ್ಕಾರದಿಂದ ಅನುಮೋದನೆ ಪಡೆಯಲು ಕಳೆದ 11 ತಿಂಗಳಿಂದ ಪ್ರಯತ್ನ ಮಾಡುತ್ತಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನೌಕರರ ಸಂಘದ ಅಧ್ಯಕ್ಷ ಕೆ.ಪಿ.ವೀರೇಶ್ ಹೇಳಿದ್ದಾರೆ.

ಸೆ. 28ರಂದು ಬೆಳಗ್ಗೆ 10 ಗಂಟೆಯಿಂದ ಅನಿರ್ದಿಷ್ಟಾವಧಿ ಧರಣಿ ನಡೆಯಲಿದೆ ಎಂದಿದ್ದಾರೆ.
ಮತ್ತಷ್ಟು
ನಾಳೆ ಸ್ಥಳೀಯ ಸಂಸ್ಥೆಗಳ ಚುನಾವಣೆ
ಶಾಂತಿ ಸ್ವರೂಪ ಭಟ್ನಾಗರ್ ಪ್ರಶಸ್ತಿಗೆ ಆಯ್ಕೆ
ಚುನಾವಣಾ ಪ್ರಚಾರ: ವಾಗ್ದಾಳಿಗೆ ಪರಸ್ಪರ ಒಪ್ಪಂದ
ಗಣಿ ದೊರೆಗಳಿಂದ ಬಿಜೆಪಿಗೆ ಗಂಡಾಂತರ
ಮಧ್ಯಂತರ ಚುನಾವಣೆಗೆ ಬಿಜೆಪಿ ಸಿದ್ದ : ಸದಾನಂದಗೌಡ
ಪಕ್ಷದ ಮುಖಂಡರನ್ನು ಹದ್ದುಬಸ್ತಿನಲ್ಲಿಡಿಃ ಗೌಡರ ಎಚ್ಚರಿಕೆ