ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಅಕ್ಟೋಬರ್ 3ರಂದು ಕುಮಾರಸ್ವಾಮಿ ಪದತ್ಯಾಗ
ಭಾರತೀಯ ಜನತಾ ಪಕ್ಷದೊಂದಿಗೆ ಈ ಮೊದಲು ಮಾಡಿಕೊಳ್ಳಲಾಗಿರುವ ಒಪ್ಪಂದದ ಪ್ರಕಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಕ್ಟೋಬರ್ 3ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಅವರು ಪ್ರಕಟಿಸಿದರು.

ಮಾಡಿಕೊಳ್ಳಲಾಗಿರುವ ಒಪ್ಪಂದದ ಪ್ರಕಾರ ಭಾರತೀಯ ಜನತಾ ಪಕ್ಷ ಉಳಿದ 20 ತಿಂಗಳುಗಳ ಕಾಲ ಮುಖ್ಯಮಂತ್ರಿ ಪದವಿಯನ್ನು ಪಡೆಯಲಿದ್ದು. ಈ ಅವಧಿಯಲ್ಲಿ ಉಭಯ ಪಕ್ಷದ ಶಾಸಕರು ಗೊಂದಲಕ್ಕೆ ಒಳಗಾಗಿ ಪಕ್ಷ ತೊರೆಯುವ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಅವರು ಕಿವಿ ಮಾತು ಹೇಳಿದರು.


ಕೆಲ ಶಾಸಕರು ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ಸಮಸ್ಯೆ ಪರಿಹಾರವಾಗುವವರೆಗೆ ನಾನೇ ಮುಖ್ಯಮಂತ್ರಿ ಪದವಿಯಲ್ಲಿ ಮುಂದುವರಿಯುವುದಕ್ಕೆ ಬಯಸಿದ್ದಾರೆ. ಆದರೆ ಅಧಿಕಾರಕ್ಕೆ ಅಂಟಿಕೊಂಡು ಕುಳಿತುಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ನನ್ನ ಕುರಿತು ಅಭಿಪ್ರಾಯ ಬದಲಾಗುವ ಸಾಧ್ಯತೆ ಇದೆ. ಅದು ನನಗೆ ಇಷ್ಟವಿಲ್ಲ ಎಂದು ಹೇಳಿದರು.

ಬಿಜೆಪಿಗೆ ಅಧಿಕಾರ ಹಸ್ತಾಂತರಿಸುವ ಮುನ್ನ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಜೆಡಿಎಸ್ ಶಾಸಕರು ಕುಮಾರಸ್ವಾಮಿ ಅವರಿಗೆ ಒತ್ತಾಯ ಮಾಡಿದ್ದಾರೆ.

ಅಧಿಕಾರ ಹಸ್ತಾಂತರಕ್ಕೆ ಕುರಿತಂತೆ ಉಂಟಾಗಿರುವ ಗೊಂದಲ ಮತ್ತು ಕುಮಾರಸ್ವಾಮಿ ರಾಜೀನಾಮೆಯ ನಂತರ ಕೇಂದ್ರ ಸರಕಾರ ತನ್ನ ಆಡಳಿತವನ್ನು ಹೇರುವ ಸಂಭವ ಇದೆ ಎಂದು ಶಾಸಕರು ಆತಂಕಗೊಂಡಿದ್ದಾರೆ.
ಮತ್ತಷ್ಟು
ಕಸಾಪ ಸಿಬ್ಬಂದಿ ಅನಿರ್ದಿಷ್ಟಾವಧಿ ಧರಣಿ
ನಾಳೆ ಸ್ಥಳೀಯ ಸಂಸ್ಥೆಗಳ ಚುನಾವಣೆ
ಶಾಂತಿ ಸ್ವರೂಪ ಭಟ್ನಾಗರ್ ಪ್ರಶಸ್ತಿಗೆ ಆಯ್ಕೆ
ಚುನಾವಣಾ ಪ್ರಚಾರ: ವಾಗ್ದಾಳಿಗೆ ಪರಸ್ಪರ ಒಪ್ಪಂದ
ಗಣಿ ದೊರೆಗಳಿಂದ ಬಿಜೆಪಿಗೆ ಗಂಡಾಂತರ
ಮಧ್ಯಂತರ ಚುನಾವಣೆಗೆ ಬಿಜೆಪಿ ಸಿದ್ದ : ಸದಾನಂದಗೌಡ