ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕ್ರಿಕೆಟ್: ಏಕದಿನ ಪಂದ್ಯ ನಾಳೆ ಆರಂಭ
ಉದ್ಯಾನ ನಗರಿ ಬೆಂಗಳೂರಿನಲ್ಲಿ ಹಬ್ಬದ ಸಂಭ್ರಮ. ಆಸ್ಟ್ತ್ರೇಲಿಯಾ ವಿರುದ್ಧದ ಏಳು ಏಕ ದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯ ನಾಳೆ ಆರಂಭ.

ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಡಲು ಬೆಂಗಳೂರಿಗೆ ಆಗಮಿಸಿರುವ ಸಿಡಿಲ ಮರಿ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ರಾಬಿನ್ ಉತ್ತಪ್ಪ, ಜಹೀರ್ ಖಾನ್, ನಗರದಲ್ಲಿ ಬೀಡು ಬಿಟ್ಟಿದ್ದಾರೆ. ಇಂದು ಮುಂಜಾನೇಯೇ ಎರಡೂ ತಂಡಗಳ ಸದಸ್ಯರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಾಳೀಮು ಆರಂಭಿಸಿದ್ದಾರೆ.

ಟ್ವೆಂಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ಭಾರತದ ಕೈಯಲ್ಲಿ ಸೋಲುಂಡು ಕಹಿ ಅನುಭವ ಪಡೆದಿರುವ ಆಸ್ಟ್ತ್ರೇಲಿಯಾ ಬೆಂಗಳೂರಿನಲ್ಲಿ ಜಯಭೇರಿ ಬಾರಿಸುವ ವಿಶ್ವಾಸ ವ್ಯಕ್ತಪಡಿಸಿದೆ.

ಈ ನಡುವೆ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂಗೆ ಭಾರೀ ಭದ್ರತೆ ಒದಗಿಸಲಾಗಿದೆ. ಕ್ರೀಡಾಂಗಣದ ಸುತ್ತ 2500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಉಭಯ ತಂಡದ ಆಟಗಾರರಿಗೂ ವಿಶೇಷ ಭದ್ರತೆ ನೀಡಲಾಗಿದೆ.

ತಂಡಗಳು ಅಭ್ಯಾಸ ನಡೆಸುವ ವೇಳೆ ಶ್ವಾನ ದಳದ ಸೇವೆಯನ್ನು ನಿಯೋಜಿಸಲಾಗಿದೆ. ಪಂದ್ಯದ ದಿನವಾದ ಶನಿವಾರ ಟ್ರಾಫಿಕ್ ನಿಯಂತ್ರಿಸಲು ಸಂಚಾರ ಪೊಲೀಸರು ವಿಶೇಷ ಕ್ರಮಗಳನ್ನು ಕೈಗೊಂಡಿದ್ದಾರೆ.
ಮತ್ತಷ್ಟು
ಅಕ್ಟೋಬರ್ 3ರಂದು ಕುಮಾರಸ್ವಾಮಿ ಪದತ್ಯಾಗ
ಕಸಾಪ ಸಿಬ್ಬಂದಿ ಅನಿರ್ದಿಷ್ಟಾವಧಿ ಧರಣಿ
ನಾಳೆ ಸ್ಥಳೀಯ ಸಂಸ್ಥೆಗಳ ಚುನಾವಣೆ
ಶಾಂತಿ ಸ್ವರೂಪ ಭಟ್ನಾಗರ್ ಪ್ರಶಸ್ತಿಗೆ ಆಯ್ಕೆ
ಚುನಾವಣಾ ಪ್ರಚಾರ: ವಾಗ್ದಾಳಿಗೆ ಪರಸ್ಪರ ಒಪ್ಪಂದ
ಗಣಿ ದೊರೆಗಳಿಂದ ಬಿಜೆಪಿಗೆ ಗಂಡಾಂತರ