ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸಚಿವರ ಆರೋಪ ಕಪ್ಪುಚುಕ್ಕೆ
ಅಧಿಕಾರದ ಕೊನೆ ಹಂತದಲ್ಲಿ ತಮಗೆ ಸಚಿವ ಸಂಪುಟದ ಸದಸ್ಯರು ಕೊಲೆಗಾರ ಪಟ್ಟ ನೀಡಿರುವುದು ತಮ್ಮ ರಾಜಕೀಯ ಜೀವನದಲ್ಲೇ ಒಂದು ಕಪ್ಪು ಚುಕ್ಕೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಸಚಿವ ಶ್ರೀರಾಮುಲು ಮೇಲೆ ನಡೆದಿದೆ ಎನ್ನಲಾದ ಗುಂಡಿನ ದಾಳಿಯ ಹಿಂದೆ ಮುಖ್ಯಮಂತ್ರಿಗಳ ಕೈವಾಡವಿದೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ರಕ್ಷಣೆ ನೀಡುವ ಜವಾಬ್ದಾರಿ ಇರುವ ತಮ್ಮ ಮೇಲೆ ಕೊಲೆ ಯತ್ನದ ಆರೋಪ ಬಂದಿರುವುದರ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಅಧಿಕಾರ ಹಸ್ತಾಂತರಕ್ಕೂ ಬಳ್ಳಾರಿ ಘಟನೆಗೂ ಸಂಬಂಧ ಕಲ್ಪಿಸಬಾರದು ಎಂದು ಬಿಜೆಪಿ ವಕ್ತಾರ ಸುರೇಶ್ ಕುಮಾರ್ ಶುಕ್ರವಾರ ಹೇಳಿದ್ದಾರೆ.

ಸಚಿವ ಶ್ರೀರಾಮುಲು ಹೇಳಿಕೆ ಹಿನ್ನೆಲೆಯಲ್ಲಿ ಎಲ್ಲ ವಿಷಯಗಳನ್ನು ಪರೀಶೀಲಿಸಿ ಅಗತ್ಯವಿದ್ದರೆ ಶ್ರೀರಾಮುಲು ವಿರುದ್ಧ ಪಕ್ಷ ಕ್ರಮ ಕೈಗೊಳ್ಳುತ್ತದೆ ಎಂದಿದ್ದಾರೆ.

ತಮ್ಮ ಮಾತುಗಳಿಗೆ ಮುಖ್ಯಮಂತ್ರಿಗಳಿಗೆ ನೋವಾಗಿದ್ದರೆ ಕ್ಷಮಿಸಬೇಕು ಎಂದು ಹೇಳಿರುವ ಸಚಿವ ಶ್ರೀರಾಮುಲು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ವಿಷಯವನ್ನು ಪುನರುಚ್ಚರಿಸಿದ್ದಾರೆ.
ಮತ್ತಷ್ಟು
ಸ್ಥಳೀಯ ಚುನಾವಣೆ: ಶಾಂತಿಯುತ ಮತದಾನ
ಅಧಿಕಾರದಿಂದ ಕೆಳಗಿಳಿಯುವುದಿಲ್ಲ: ಕುಮಾರಸ್ವಾಮಿ
ಕ್ರಿಕೆಟ್: ಏಕದಿನ ಪಂದ್ಯ ನಾಳೆ ಆರಂಭ
ಅಕ್ಟೋಬರ್ 3ರಂದು ಕುಮಾರಸ್ವಾಮಿ ಪದತ್ಯಾಗ
ಕಸಾಪ ಸಿಬ್ಬಂದಿ ಅನಿರ್ದಿಷ್ಟಾವಧಿ ಧರಣಿ
ನಾಳೆ ಸ್ಥಳೀಯ ಸಂಸ್ಥೆಗಳ ಚುನಾವಣೆ