ಅಧಿಕಾರ ಹಸ್ತಾಂತರ ನಡೆಯುವ ಸಾಧ್ಯತೆ ಇರುವ ಅಕ್ಟೋಬರ್ 3ರ ಮುನ್ನಾದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಬಡವರಿಗೆ ಹಕ್ಕುಪತ್ರ ವಿತರಣೆ ಸಮಾರಂಭ ನಡೆಯಲಿದೆ.
ಗಾಂಧಿಜಯಂತಿಯಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಿಎಂ ನೇತೃತ್ವದಲ್ಲಿ ಜಿಲ್ಲಾಡಳಿತ ಬೃಹತ್ ಸಮಾವೇಶ ಏರ್ಪಡಿಸಿದೆ.
ಸರ್ಕಾರದ ಅಧಿಕೃತ ಕಾಯಕ್ರಮ ಇದಾಗಿದ್ದು, ಬಡವರ ಸಣ್ಣಪುಟ್ಟ ನಿವೇಶನ ಹಾಗೂ ಮನೆಗಳ ಸಕ್ರಮೀಕರಣ ಮಾಡಲಾಗುವುದು ಹಾಗೂ ಅವರಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು.
ಒಟ್ಟು 15 ಸಾವಿರ ಹಕ್ಕುಪತ್ರಗಳನ್ನು ಈ ಕಾರ್ಯಕ್ರಮದಲ್ಲಿ ವಿತರಿಸಲಾಗುತ್ತದೆ. ಇನ್ನೂ ಐದು ಸಾವಿರ ಹಕ್ಕುಪತ್ರ ವಿತರಣಾ ಕ್ರಮ ಕೈಗೊಳ್ಳಬೇಕಿದೆ.
ಕೊಳಗೇರಿ ನಿವಾಸಿಗಳಿಗೆ 2005 ಅ.2ರೊಳಗೆ ಹಕ್ಕುಪತ್ರ ನೀಡಬೇಕೆಂದು ಧರಂಸಿಂಗ್ ಸರ್ಕಾರಕ್ಕೆ ದೇವೇಗೌಡರು ಅರಮನೆ ಮೈದಾನದಲ್ಲಿ ದರಿದ್ರ ನಾರಾಯಣ ಮೆರವಣಿಗೆ ನಡೆಸಿದಾಗ ಗಡುವು ವಿಧಿಸಿದ್ದರು.
ಇದಾದ 2 ವರ್ಷಗಳ ನಂತರ ಅವರ ಪುತ್ರ ಕುಮಾರಸ್ವಾಮಿ ಅವರು ಬಡವರಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮವನ್ನು ಏರ್ಪಡಿಸಿರುವುದು ಕಾಕತಾಳೀಯ ಅಲ್ಲ.
|