ಹಳೆಯ ಕಾಲದ ಕಟ್ಟಡಗಳು, ಮಣ್ಣಿನಿಂದ ಕಟ್ಟಿದ ಮನೆಗಳು, ಪಾರಂಪರಿಕ ಕೆತ್ತನೆ ಕಲೆಗಳನ್ನು ಉಳಿಸಿಕೊಂಡಿರುವ ಮನೆಗಳನ್ನು ಕೆಡವದೆ ಹಾಗೇಯೇ ಸಂರಕ್ಷಿಸಲು ಅಗತ್ಯವಿದ್ದಲ್ಲಿ ಸಾಲ ಸೌಲಭ್ಯ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಹಳೇಬೀಡು ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿದ್ದ ಯುನೆಸ್ಕೋ ತಂಡ, ಸರ್ಕಾರಕ್ಕೆ ಇಂಥ ಹಳೆಯ ಕಟ್ಟಡಗಳನ್ನು ಉಳಿಸಬೇಕೆಂದು ಸಲಹೆ ನೀಡಿದೆ.
ಅಮೆರಿಕಾದಲ್ಲು ಇಂಥ ಪರಿಕಲ್ಪನೆ ಈಗ ಇದೆ.
ಈ ಸಲಹೆಯನ್ನು ಸ್ವೀಕರಿಸಿ ರಾಜ್ಯ ಸರ್ಕಾರ ಅಂತಹ ಕಟ್ಟಡ ಹಾಗೂ ಮನೆಗಳನ್ನು ಉಳಿಸಲು ಅಗತ್ಯವಿದ್ದರೆ ಸಾಲ ಸೌಲಭ್ಯವನ್ನು ನೀಡಬೇಕೆಂದು ಸರ್ಕಾರ ತೀರ್ಮಾನಿಸಿದೆ.
|