ಪಾದಚಾರಿ ರಸ್ತೆಯಲ್ಲೇ ಸುದ್ದಿಗೋಷ್ಠಿ ನಡೆಸಿ ವಿವಾದಕ್ಕೆ ಒಳಗಾದನಂತರ ಮೈಸೂರು ಲ್ಯಾಂಪ್ ವ್ಯವಸ್ಥಾಪಕ ಹುದ್ದೆಯಿಂದ ಬೆಳಗಾವಿ ಮಲಪ್ರಭಾ-ಅಚ್ಚುಕಟ್ಟು ಪ್ರದೇಶಾಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೆಗೊಂಡ ಹಿರಿಯ ಐಎಎಸ್ ಅಧಿಕಾರಿ ವಿಜಯಕುಮಾರ್ ತಮ್ಮ ವಾಸ್ತವ್ಯಕ್ಕೆ ಮನೆ ನೀಡದಿರುವುದನ್ನು ಪ್ರತಿಭಟಿಸಿ ಕಚೇರಿಯಲ್ಲೇ ವಾಸ್ತವ್ಯ ಆರಂಭಿಸಿದ್ದಾರೆ.
ಅಲ್ಲೇ ಸ್ನಾನ, ಅಲ್ಲೇ ಊಟ, ಅಲ್ಲೇ ನಿದ್ದೆ, ಮತ್ತು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಬೆಳಗಾವಿಯಲ್ಲಿ ಈ ಹಿಂದೆ ಪೋರ್ಟ್ ಆವರಣದಲ್ಲಿ ಕಾಡಾ ವ್ಯವಸ್ಥಾಪಕ ನಿರ್ದೇಶಕರ ಮನೆ ಇತ್ತು. ಆದರೆ, ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಆ ಮನೆ ಸೇರಿದಂತೆ ಅಲ್ಲಿನ ಜಾಗವನ್ನು ರಾಮಕೃಷ್ಣ ಆಶ್ರಮಕ್ಕೆ ನೀಡಲಾಗಿದೆ.
ಆ ನಂತರ ಬಂದ ಕುಟಿನ್ಹೋ ಅವರ ವಿನಂತಿ ಮೇರೆಗೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಸೇರಿದ ಮನೆಯೊಂದನ್ನು ನೀಡಲಾಗಿತ್ತು. ಅವರು ವರ್ಗವಾದನಂತರ ಆ ಮನೆಯನ್ನು ಪಾಪಸ್ ಪಡೆಯಲಾಗಿತ್ತು.
|