ಒತ್ತುವರಿದಾರರಿಂದ ತೆರವುಗೊಳಿಸಿದ ಸರ್ಕಾರಿ ಭೂಮಿಯನ್ನು ಹರಾಜು ಹಾಕಿದರೆ ಸರ್ಕಾರಕ್ಕೆ ಆದಾಯ ಬರುವುದೆಂಬ ನಿರೀಕ್ಷೆ ಸುಳ್ಳಾಗಿದೆ.
ಭೂಮಿ ಹರಾಜಿನಲ್ಲಿ ಪಾಲ್ಗೊಳ್ಳುವ ಲ್ಯಾಂಡ್ ಡೆವಲಪರ್ಸ್ ಮತ್ತು ಇತರರು ಕಡಿಮೆ ಬೆಲೆಗೆ ಹರಾಜು ಕೂಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ.
ಬೆಂಗಳೂರು ಉತ್ತರ ಜಿಲ್ಲೆಯ ಶಿವಕೋಟೆ ಗ್ರಾಮದ 19 ಎಕರೆ 13 ಗಂಟೆ ಜಮೀನನ್ನು ಗುರುವಾರ ಹರಾಜು ಹಾಕಲಾಗಿತ್ತು.
ಸರಕಾರ ನಿಗದಿಪಡಿಸಿರುವ ದರದಂತೆ ಅದು 19 ಕೋಟಿ ರೂ. ಬಾಳುತ್ತದೆ. ಆದರೆ ಹರಾಜಿನಲ್ಲಿ ಬಿಡ್ ಕೂಗಿದ್ದು 3.20 ಕೋಟಿ ರೂ.ಗಳಿಗೆ.
ಇದಕ್ಕೆ ಕಾರಣವೆಂದರೆ ಸರ್ಕಾರ ಭೂಮಿ ಒತ್ತುವರಿ ಕುರಿತಂತೆ ಹೈಕೋರ್ಟನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿತರಣಾ ಹಂತದಲ್ಲಿರುವುದು.
ಅದಕ್ಕಾಗಿಯೇ ಈ ಪ್ರಕರಣದ ತೀರ್ಪು ಪ್ರಕಟಿಸುವವರೆಗೆ ಹರಾಜಿನಲ್ಲಿ ಭೂಮಿ ಖರೀದಿಯ ಅಂತಿಮ ನಿರ್ಧಾರ ಕೈಗೊಳ್ಳಲಾಗದು ಎಂದು ಕಂದಾಯ ಇಲಾಖೆ ಅಧಿಸೂಚನೆ ಹೊರಡಿಸಿದೆ. ಹಾಗಾಗಿ ಲ್ಯಾಂಡ್ ಡೆವಲಪರ್ಸ್ ಸಹಾ ಹರಾಜಿಗೆ ದೂರ ಉಳಿದಿದ್ದಾರೆ.
|