ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರಾಜ್ಯ ರಾಜಕಾರಣ: ಸಿನ್ಹಾ, ಗೌಡ ಇಂದು ಚರ್ಚೆ
ಅಧಿಕಾರ ಹಸ್ತಾಂತರದ ಬಿಕ್ಕಟ್ಟು ಪರಿಹರಿಸಲು ಶುಕ್ರವಾರ ರಾತ್ರಿ ನಗರಕ್ಕೆ ಆಗಮಿಸಿದ ಭಾರತೀಯ ಜನತಾಪಾರ್ಟಿಯ ರಾಷ್ಟ್ರೀಯ ಉಪಾದ್ಯಕ್ಷ ಮತ್ತು ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಯಶವಂತ್ ಸಿನ್ಹಾ ಅವರು ಉಪಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ಡಿ.ವಿ. ಸದಾನಂದಗೌಡ ಹಾಗೂ ಸಚಿವರೊಂದಿಗೆ ಸುದಿರ್ಘ ಸಮಾಲೋಚನೆ ನಡೆಸಿದರು.

ವಿಮಾನ ನಿಲ್ದಾಣದಿಂದ ನೇರವಾಗಿ ಡಾಲರ್ಸ್ ಕಾಲೋನಿಯಲ್ಲಿ ಇರುವ ಯಡಿಯೂರಪ್ಪ ಅವರ ಮನೆಗೆ ತೆರಳಿದ ಸಿನ್ಹಾ ಅವರು, ಮಿತ್ರ ಪಕ್ಷಗಳ ನಡುವೆ ವಿರಸಕ್ಕೆ ಕಾರಣವಾಗಿರುವ ಎಲ್ಲ ಅಂಶಗಳ ವಿವರಗಳನ್ನು ಪಕ್ಷದ ಮುಖಂಡರಿಂದ ಪಡೆದುಕೊಂಡರು. ಶನಿವಾರ ಬೆಳಿಗ್ಗೆ ಜೆಡಿಎಸ್ ನಾಯಕ ಎಚ್ ಡಿ ದೇವೆಗೌಡರನ್ನು ಭೇಟಿಯಾಗಿ 2-3 ಸುತ್ತಿನ ಮಾತುಕತೆ ನಡೆಸಲಿದ್ದಾರೆ.

ಮುಖಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಸಚಿವ ಬಿ. ಶ್ರೀರಾಮುಲು ಮಾಡಿರುವ ಕೊಲೆ ಯತ್ನದ ಆರೋಪದ ಹಿನ್ನಲೆಯಿಂದ ಗೌಡರಿಂದ ಬರಬಹುದಾದ ಟೀಕೆ ಮತ್ತು ಬೇಡಿಕೆಗಳನ್ನು ಆಲಿಸಿ, ನಂತರ ಪಕ್ಷದ ರಾಜ್ಯ ನಾಯಕರೊಂದಿಗೆ ಯಶವಂತ್ ಸಿನ್ಹಾ ಚರ್ಚಿಸಲಿದ್ದಾರೆ. ರಾಜ್ಯ ನಾಯಕರೊಂದಿಗೆ ಮಾತುಕತೆ ನಡೆಸಿದ ನಂತರ ಉಭಯ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯ ಪರಿಹರಿಸುವ ಯತ್ನಕ್ಕೆ ಕೈಹಾಕಲಿದ್ದಾರೆ ಎಂದು ತಿಳಿದುಬಂದಿದೆ.
ಮತ್ತಷ್ಟು
ಕುಮಾರಸ್ವಾಮಿ ಒಪ್ಪಂದದಂತೆ ನಡೆಯಲಿ: ಯಡಿಯೂರಪ್ಪ
ಒತ್ತುವರಿ ಭೂಮಿ ಹರಾಜಿಗೆ ನೀರಸ ಪ್ರತಿಕ್ರಿಯೆ
ಕಛೇರಿಯಲ್ಲೇ ಐಎಎಸ್ ಅಧಿಕಾರಿ ವಾಸ್ತವ್ಯ
ಐತಿಹಾಸಿಕ ಕಟ್ಟಡಗಳ ಸಂರಕ್ಷಣೆಗೆ ಸಾಲ ಸೌಲಭ್ಯ
ಹಕ್ಕುಪತ್ರ ವಿತರಣಾ ಸಮಾರಂಭ
ಕುತೂಹಲ ಕೆರಳಿಸಿರುವ ಅಧಿಕಾರ ಹಸ್ತಾಂತರ