ರಾಜ್ಯದಲ್ಲಿ ಬಿಜೆಪಿಗೆ ಸಮ್ಮಿಶ್ರ ಸರ್ಕಾರದ ಅಧಿಕಾರ ಹಸ್ತಾಂತರ ಆಗುವುದಿಲ್ಲ, ಮುಂದೆ ಮಧ್ಯಂತರ ಚುನಾವಣೆ ಖಚಿತ ಎಂದು ಕಾಂಗ್ರೆಸ್ ಭವಿಷ್ಯ ನುಡಿಯುತ್ತಿದೆ.
ಅಧಿಕಾರ ಹಸ್ತಾಂತರ ಆಗದಿದ್ದರೆ ಮಧ್ಯಂತರ ಚುನಾವಣೆಗೆ ಸಜ್ಜುಗೊಳ್ಳಬೇಕಾಗಿದೆ ಎಂದು ಬಿಜೆಪಿಯೂ ಭಾವಿಸುತ್ತಿದೆ.
ಈ ಪರಿಣಾಮಗಳಿಂದಾಗಿ ಮಧ್ಯಂತರ ಚುನಾವಣೆ ಎದುರಾದರೆ ಗತಿ ಏನು ಎಂಬುದು ಪಕ್ಷೇತರ ಹಾಗೂ ಇತರೆ ಪಕ್ಷಗಳ ಚಿಂತೆ.
ಮಧ್ಯಂತರ ಚುನಾವಣೆ ತಪ್ಪಿಸುವ ಸಂಬಂಧ ಕನ್ನಡ ಚಳವಳಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಅಕ್ಟೋಬರ್ 5 ರಂದು ಸಮಾನ ಮನಸ್ಕರು ಮತ್ತು ರಾಜಕೀಯ ಮುಖಂಡರು ಸಭೆ ನಡೆಸಲಿದ್ದಾರೆ.
ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಯಾವುದೇ ಸಂದರ್ಭದಲ್ಲಿ ಮಧ್ಯಂತರ ಚುನಾವಣೆಗೆ ಸಿದ್ಧವಾಗಬಹುದು.
ಆದರೆ, ಬಹುತೇಕ ಶಾಸಕರು ಮಧ್ಯಂತರ ಚುನಾವಣೆಗೆ ಒಲವು ತೋರುತ್ತಿಲ್ಲ.ಈ ಹಿನ್ನೆಲೆಯಲ್ಲಿ ಚುನಾವಣೆ ತಪ್ಪಿಸಲು ಸಮಾನ ಮನಸ್ಕರ ಒಕ್ಕೂಟ ಸೇರಿ ಪರ್ಯಾಯ ಸರ್ಕಾರ ರಚಿಸುವ ಕುರಿತು ಚರ್ಚಿಸಲಿದೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ಕನ್ನಡಕ್ಕೆ ಶಾಸ್ತ್ತ್ರೀಯ ಸ್ಥಾನಮಾನ ನೀಡುವಂತೆ ಒತ್ತಾಯಿಸಲು ನವೆಂಬರ್ 10ರಂದು ಪ್ರಧಾನಿ ನಿವಾಸದ ಎದುರು ಸತ್ಯಾಗ್ರಹ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
|