ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಮಧ್ಯಂತರ ಚುನಾವಣೆ ಇಲ್ಲ: ಕುಮಾರಸ್ವಾಮಿ
NRB
ಗ್ರಾಮೀಣ ಪ್ರದೇಶಗಳಲ್ಲದೇ ನಗರ ಪ್ರದೇಶಗಳಲ್ಲೂ ಜಾತ್ಯತೀತ ಪಕ್ಷವನ್ನು ಜನರು ಬೆಂಬಲಿಸಿದ್ದಾರೆ ಎಂಬುದು ಈ ಸ್ಥಳೀಯ ಸಂಸ್ಥೆಗಳ ಫಲಿತಾಂಶದಿಂದ ಖಚಿತವಾಗಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ಗೆ ಹೆಚ್ಚು ಸ್ಥಾನಗಳು ಲಭಿಸಿರುವ ಹಿನ್ನೆಲೆಯಲ್ಲಿ ಭಾನುವಾರ ಪ್ರತಿಕ್ರಿಯಿಸಿದ ಅವರು ಈ ಫಲಿತಾಂಶದಿಂದ ಉತ್ತೇಜನಗೊಂಡು ಮಧ್ಯಂತರ ವಿಧಾನಸಭೆ ಚುನಾವಣೆಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜನರ ನೀರೀಕ್ಷೆಯಂತೆ ತಮ್ಮ ಪಕ್ಷ ಆಡಳಿತ ನಡೆಸಿರುವುದೇ ಪಕ್ಷದ ಗೆಲುವಿಗೆ ಕಾರಣ ಎಂದು ವಿಶ್ಲೇಷಿಸಿದ ಅವರು, ಈ ಫಲಿತಾಂಶದಿಂದ ನಗರ ಪ್ರದೇಶಗಳಲ್ಲಿ ಜೆಡಿಎಸ್ ಹೊಸ ನೆಲೆಗಟ್ಟು ಕಂಡುಕೊಂಡಿದೆ ಎಂದು ಹೇಳಿದ್ದಾರೆ.
ಈ ಚುನಾವಣೆಯಲ್ಲಿ ಮಹಿಳೆಯರು ಹಾಗೂ ಅಲ್ಪ ಸಂಖ್ಯಾತರು ತಮ್ಮ ಪಕ್ಷವನ್ನು ಬೆಂಬಲಿಸಿದ್ದರಿಂದಲೇ ತಮಗೆ ಹೆಚ್ಚು ಸೀಟುಗಳು ಲಭ್ಯವಾಗಿವೆ ಎಂದಿದ್ದಾರೆ.
ಮೊದಲಬಾರಿಗೆ ತಮ್ಮ ಪಕ್ಷ ಉತ್ತರ ಕರ್ನಾಟಕದಲ್ಲಿ ಬೇರೂರುವಂತೆ ಆಗಿದ್ದು, ಅಧಿಕಾರ ಹಸ್ತಾಂತರ ವೈಯಕ್ತಿಕ ನಿರ್ಧಾರದಿಂದ ಆಗುವುದಿಲ್ಲ ಎಂಬುದನ್ನು ಮಾಧ್ಯಮಗಳು ಮನಗಾಣಬೇಕು ಎಂದು ತಿಳಿಸಿದ್ದಾರೆ.
ತಮ್ಮ ಪಕ್ಷವನ್ನು ಬೆಂಬಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಮತ್ತಷ್ಟು
ಶ್ರೀರಾಮುಲು ರಾಜೀನಾಮೆ: ಸಿಎಂ ವಿರುದ್ಧ ಮತ್ತೆ ಆರೋಪ
ಕಾಮನ್‌ವೆಲ್ತ್ ಭಾರತ ಪ್ರತಿನಿಧಿಯಾಗಿ ಬಿಕೆಸಿ ಆಯ್ಕೆ
ಅ. 5: ವಾಟಾಳ್ ನೇತೃತ್ವದಲ್ಲಿ ಚುನಾವಣೆ ವಿರೋಧಿಗಳ ಸಭೆ
ಸಾಹಿತಿ ಚಿಕ್ಕವೀರಯ್ಯ ನಿಧನ
ಸ್ಥಳೀಯಸಂಸ್ಥೆ: ಮರು ಮತದಾನ ಶಾಂತಿಯುತ
ಬಿಜೆಪಿಗೆ ಜೆಡಿಎಸ್ ಅಧಿಕಾರ ಕೊಡುವುದು ಅನುಮಾನ: ಖರ್ಗೆ