ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಅಧಿಕಾರದಲ್ಲಿರುವುದರಿಂದಲೇ ಜೆಡಿಎಸ್‌ಗೆ ಹೆಚ್ಚು ಸ್ಥಾನ: ಖರ್ಗೆ
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ಗೆ ಹೆಚ್ಚು ಸ್ಥಾನಗಳು ಲಭಿಸಲು ಆ ಪಕ್ಷ ಅಧಿಕಾರದಲ್ಲೇ ಇರುವುದು ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿಶ್ಲೇಷಿಸಿದ್ದಾರೆ.

ಜೆಡಿಎಸ್‌ಗೆ ಹೆಚ್ಚು ಸ್ಥಾನಗಳು ಲಭಿಸಿದ್ದು, ತಮ್ಮ ಪಕ್ಷಕ್ಕೆ ಕಡಿಮೆ ಸ್ಥಾನಗಳು ಲಭಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು ವಿರೋಧ ಪಕ್ಷವಾಗಿದ್ದರೂ ಅನೇಕ ವಾರ್ಡ್‌ಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಯಾರ ಜತೆಯೂ ಕೈಜೋಡಿಸದೆ, ಏಕಾಂಗಿಯಾಗಿ ತಾವು ಈ ಪ್ರಮಾಣದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಜಯಗಳಿಸಿರುವುದು ತಮಗೆ ಹೆಮ್ಮೆ ಎನಿಸಿದೆ ಎಂದಿದ್ದಾರೆ.

ಕೆಲಕಡೆ ಜೆಡಿಎಸ್ ಅಭ್ಯರ್ಥಿಗಳೂ ಸಹಾ ಮಣ್ಣು ಮುಕ್ಕಿದ್ದಾರೆ ಎಂದು ಹೇಳಿದ ಅವರು ಜನ ನಮ್ಮ ಪಕ್ಷವನ್ನು ತಿರಸ್ಕರಿಸಿಲ್ಲ, ಆದರೆ ಜನರ ತೀರ್ಮಾನಕ್ಕೆ ತಲೆ ಬಾಗುವುದಾಗಿ ಹೇಳಿದ್ದಾರೆ.
ಮತ್ತಷ್ಟು
ವಿಧಾನಸಭೆ ಮಧ್ಯಂತರ ಚುನಾವಣೆ ಇಲ್ಲ: ಸಿಎಂ
ಸ್ಥಳಿಯ ಸಂಸ್ಥೆ ಚುನಾವಣೆ ಜೆಡಿಎಸ್ ಭರ್ಜರಿ ಗೆಲುವು
ಮತ್ತೆ ಉದ್ವಿಘ್ನಗೊಂಡಿರುವ ಬಳ್ಳಾರಿ
ಚೆಲುವಿನ ಚಿತ್ತಾರಕ್ಕೆ ಮಹಿಳಾ ಆಯೋಗದ ನೋಟಿಸ್
ಅಧಿಕಾರವೇ ಜೆಡಿಎಸ್ ಗೆಲುವಿಗೆ ಮೂಲ: ಖರ್ಗೆ
ಮಧ್ಯಂತರ ಚುನಾವಣೆ ಇಲ್ಲ: ಕುಮಾರಸ್ವಾಮಿ