ಕಳೆದ 5 ವರ್ಷಗಳಿಂದ ಕುಂಟುತ್ತಾ ತೆವಳುತ್ತಾ ನಿರ್ಮಾಣವಾಗುತ್ತಿದ್ದ ವಾರ್ತಾ ಇಲಾಖೆಯ ಲಿವಾರ್ತಾಸೌಧಳಿ ಭಾನುವಾರ ಉದ್ಘಾಟನೆಗೊಂಡಿದೆ.
ನಗರದ ಇನ್ಪೆಂಟ್ರಿ ರಸ್ತೆಯ ಸುಮಾರು ಎರಡು ಎಕರೆ ಪ್ರದೆಶದಲ್ಲಿ 2002ರಲ್ಲಿ ಭವನದ ಕಾಮಗಾರಿಗೆ ಚಾಲನೆ ನಿಡಲಾಗಿತ್ತು. ಆದರೆ, ಹಲವು ಕಾರಣಗಳಿಂದ ಕಾಮಗಾರಿ ವಿಳಂಬವಾಗಿ ಸಾಗಿತ್ತು. ಇದಕ್ಕಾಗಿ 6.68 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಉದ್ಘಾಟನೆಗೊಂಡಿದ್ದರೂ ವಾರ್ತಾಸೌಧದ ಶೇ. 95 ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದೆ.
ಕಟ್ಟಡದ ಒಳಾಂಗಣ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಇದಕ್ಕೆ ಇನ್ನೂ ಟೆಂಡರ್ ಸಹಾ ಕರೆದಿಲ್ಲ. ಸದ್ಯದಲ್ಲೇ ಟೆಂಡರ್ ಕರೆದು ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ವಾರ್ತಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮೂರು ಮಹಡಿಗಳ ವಾರ್ತಾಸೌಧದಲ್ಲಿ 150 ಆಸನಗಳಿರುವ ಸಭಾಭವನ ಹಾಗೂ ಚಿಕ್ಕ ಚಿತ್ರ ಮಂದಿರವಿದೆ. ವಿಶ್ವೇಶ್ವರ ಟವರ್ನಲ್ಲಿರುವ ವಾರ್ತಾ ಇಲಾಖೆಯ ಪ್ರಕಟಣಾ ವಿಭಾಗವು ಇಲ್ಲಿಗೆ ಸ್ಥಳಾಂತರಗೊಳ್ಳಲಿದೆ. ಕಟ್ಟಡದಲ್ಲಿ ಮಳೆ ಕೊಯ್ಲು ವ್ಯವಸ್ಥೆ ಮಾಡಲಾಗಿದೆ. ಬಾದಾಮಿ ಹೌಸ್, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಮತ್ತು ವಾರ್ತಾ ಇಲಾಖೆ ಕೇಂದ್ರ ಕಚೇರಿಗಳು ಇದೇ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿವೆ.
|