ಕರ್ನಾಟಕ ವಿಶ್ವವಿದ್ಯಾಲಯ ನಿವೃತ್ತ ಕುಲಪತಿ ಮತ್ತು ಪಂಜಾಬ್ ಮಾಜಿ ರಾಜ್ಯಪಾಲ ದಿವಂಗತ ಡಾ.ಡಿ.ಸಿ ಪಾವಟೆ ನೆನಪಿನಲ್ಲಿ ನಿಡಲಾಗುವ ಕೇಂಬ್ರಿಜ್ ಫೆಲೋಶಿಪ್‌ಗೆ ಈ ಬಾರಿ ಬೆಂಗಳೂರಿನ ಯುವ ನ್ಯಾಯವಾದಿ ಜಯ್ನಾ ಕೊಠಾರಿ ಆಯ್ಕೆಯಾಗಿದ್ದಾರೆ.
ಬ್ರಿಟನ್ನ ಕೇಂಬ್ರಿಜ್ ವಿವಿಯ ಎಂಟನೇ ಪಾವಟೆ ಫೆಲೋ ಆಗಿ ಆಯ್ಕೆಯಾಗಿರುವ ಜಯ್ನಾ ಬೆಂಗಳೂರಿನ ವಿಶ್ವವಿದ್ಯಾಲಯ ಕಾನೂನು ಕಾಲೇಜು ಶಾಲೆಯಲ್ಲಿ ಕಲಿತವರು. ಸರ್ವೋಚ್ಛ ನ್ಯಾಯಾಲಯದ ವಕೀಲ ವೃತ್ತಿ ಕೈಗೊಂಡಿರುವ ಅವರು ಮಹಿಳೆಯ ಕಾನೂನು ಹಕ್ಕುಗಳ ಕುರಿತು ಸ್ವಯಂಸೇವಾ ಸಂಸ್ಥೆಯೊಂದನ್ನು ಆರಂಭಿಸಿದವರು.
ಬೌದ್ದಿಕ ಹಕ್ಕುಗಳು, ನ್ಯಾಯಶಾಸ್ತ್ತ್ರ ಹಾಗೂ ತುಲನಾತ್ಮಕ ಮಾನವ ಹಕ್ಕುಗಳ ಕಾನೂನು ಕುರಿತು ಆಕ್ಸ್ಫರ್ಡ್ ವಿವಿ ಸ್ನಾತಕೋತ್ತರ ಪದವಿ ಗಳಿಸಿದವರು.
2005ರ ವಿಕಲಾಂಗ ಹಕ್ಕುಗಳ ಕುರಿತ ಅಂತಾರಾಷ್ಟ್ತ್ರೀಯ ಅಧ್ಯಯನ ಕೇಂದ್ರದಲ್ಲಿ ಸಂಶೋಧನಾ ಕಾರ್ಯದಲ್ಲಿ ತೊಡಗಲಿದ್ದಾರೆ.
ಭಾರತ, ದಕ್ಷಿಣ ಆಫ್ರಿಕಾ, ಅಮೆರಿಕ, ಬ್ರಿಟನ್ ಹಾಗೂ ಕೆನಡಾ ದೇಶಗಳಲ್ಲಿ ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಕುರಿತ ವಿಶ್ವಸಂಸ್ಥೆಯ ಸಮ್ಮೇಳನವೊಂದಕ್ಕೆ ಇತ್ತೀಚಿಗಷ್ಟೇ ಭಾರತ ಅಂಕಿತ ಹಾಕಿದೆ. ಈ ಅಂಕಿತ ಹಾಕಿರುವ ಭಾರತ ತನ್ನ ವಿಕಲಾಂಗ ನಾಗರಿಕರ ಮಾನವ ಹಕ್ಕುಗಳಿಗೆ ಅಂತಾರಾಷ್ಟ್ತ್ರೀಯ ದರ್ಜೆಯ ಮಾನ್ಯತೆ ನೀಡಲು ಬದ್ಧವಾಗಿದೆ. ಇತಿಹಾಸ, ರಾಜ್ಯ ಶಾಸ್ತ್ತ್ರ, ಪಾವಟೆ ಫೆಲೋ ಅಂತಾರಾಷ್ಟ್ತ್ರೀಯ ಕಾನೂನು, ಅರ್ಥಶಾಸ್ತ್ತ್ರ ಹಾಗೂ ಮಿಲಿಟರಿ ವ್ಯವಹಾರಗಳ ಕ್ಷೇತ್ರದಲ್ಲಿ ಭಾರತಕ್ಕೆ ಪ್ರಸ್ತುತವಾಗಿರುವ ವಿಷಯವೊಂದರ ಕುರಿತು ಅಧ್ಯಯನ ನಡೆಸಲು ಪಾವಟೆ ಫೆಲೋಶಿಪ್ ಮೀಸಲು.
|