ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಜೆಡಿಎಸ್ ರಾಗ ಬದಲು
ND
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯಭೇರಿ ಬಾರಿಸಿದನಂತರ ಸಮ್ಮಿಶ್ರ ಸರ್ಕಾರದ ಅಧಿಕಾರ ಹಸ್ತಾಂತರ ಕುರಿತಂತೆ ಜೆಡಿಎಸ್ ರಾಗ ಬದಲಾಯಿಸಿದೆ. ತಾವು ನೀಡಿದ ವಚನಕ್ಕೆ ಕಟ್ಟುಬಿದ್ದು ಅಧಿಕಾರ ಹಸ್ತಾಂತರಕ್ಕೆ ಮುಂದಾಗುವುದಾಗಿ ಹೇಳುತ್ತಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಾತಿನ ಧಾಟಿ ಬದಲಾಗಿದೆ.

ತಾವೊಬ್ಬರು ನಿರ್ಧಾರ ತೆಗೆದುಕೊಳ್ಳುವ್ಯದರಿಂದ ಅಧಿಕಾರ ಹಸ್ತಾಂತರವಾಗದು ಎಂದು ಹೇಳಿದ್ದಾರೆ. ಬಳ್ಳಾರಿಯ ಬಿಜೆಪಿ ದೊರೆಗಳಾದ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಅವರು ಆರೋಪಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತೀವ್ರ ನೊಂದಿದ್ದಾರೆ.

ಹಾಗಾಗಿ ಈ ವಾತಾವರಣ ತಿಳಿಯಾಗುವ ವರೆಗೆ ಅಧಿಕಾರ ಹಸ್ತಾಂತರದ ಮಾತು ಬೇಡ, ವಾತಾವರಣ ತಿಳಿಯಾಗಿಸುವ ಜವಾಬ್ದಾರಿಯೂ ಬಿಜೆಪಿ ಮುಖಂಡರದ್ದೇ ಎಂದು ಹೇಳಿ ಬಿಜೆಪಿ ವರಿಷ್ಠರೊಂದಿಗೆ ಮಾತನಾಡದೆ ದೆಹಲಿಯಿಂದ ದೇವೇಗೌಡರು ವಾಪಸ್ ಬಂದರು. ಶ್ರೀರಾಮುಲು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದರೂ ಜೆಡಿಎಸ್ ಮುಖಂಡರಿಗೆ ಸಮಾಧಾನ ಆಗಿಲ್ಲ.
ಮತ್ತಷ್ಟು
ಬಿಜೆಪಿ ಸಚಿವರ ಸಾಮೂಹಿಕ ರಾಜೀನಾಮೆ?
ವಿದ್ಯುತ್ ಬೇಡಿಕೆ ಪೂರೈಕೆಗೆ ಹೊಸ ಯೋಜನೆ
ಜಯ್ನಾ ಕೊಠಾರಿಗೆ ಪಾವಟೆ ಫೆಲೋಶಿಪ್
ವಾರ್ತಾ ಸೌಧ ಉದ್ಘಾಟನೆ
ಅಧಿಕಾರದಲ್ಲಿರುವುದರಿಂದಲೇ ಜೆಡಿಎಸ್‌ಗೆ ಹೆಚ್ಚು ಸ್ಥಾನ: ಖರ್ಗೆ
ವಿಧಾನಸಭೆ ಮಧ್ಯಂತರ ಚುನಾವಣೆ ಇಲ್ಲ: ಸಿಎಂ