ನಗರದ ಎಂ. ರಾಜೇಶ್ ಎಂಬ ಯೋಧರು ದೂರದ ಜಮ್ಮುವಿನ ನಗೊರ್ತ ಎಂಬಲ್ಲಿ ಅ. 1 ಬೆಳಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಬಂದೂಕಿನಿಂದಲೇ 22 ವರ್ಷದ ಯೋಧ ಗುಂಡು ಹಾರಿಸಿಕೊಂಡಿದ್ದಾಗಿ ಸೇನೆಯ ಅಧಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣ ಕುರಿತು ಮಿಲಿಟರಿ ನ್ಯಾಯಾಲಯ ತನಿಖೆಗೆ ಆದೇಶಿಸಿದೆ. ತನ್ನ ಸಹೋದ್ಯೋಗಿಯೊಂದಿಗೆ ನಗೊರ್ತದ ವಸತಿ ಸಮುಚ್ಚಯದ ಕಾವಲು ಕಾಯುತ್ತಿದ್ದಾಗ ಯೋಧ ಆತ್ಮಹತ್ಯೆಗೆ ಶರಣಾಗಿದ್ದಾಗಿ ಸೇನಾಧಿಕಾರಿಗಳು ತಿಳಿಸಿದ್ದಾರೆ. ಕಾವಲು ಕಾಯುವ ಅವಧಿ ಮುಗಿಯುತ್ತಿದ್ದಾಗ ರಾಜೇಶ್ ಸಹೋದ್ಯೋಗಿ ನಂತರದ ಪಾಳಿಯ ಸಹೋದ್ಯೋಗಿಗಳನ್ನು ಕರೆಯಲು ಮುಂದಾಗಿ 50 ಮೀಟರ್ ನಷ್ಟು ತೆರಳಿದಾಗ ಬಂದೂಕಿನಿಂದ ಗುಂಡು ಹಾರಿದ ಶಬ್ದ ಬಂತು. ಆ ಸ್ಥಳಕ್ಕೆ ಧಾವಿಸಿಬಂದಾಗ ರಾಜೇಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದ. ರಾಜೇಶ್ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ.
|