ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಅನುದಾನ ರಹಿತ ಶಾಲೆಗೆ ಮಂಜೂರಾತಿ ಇಲ್ಲ
ಸಮ್ಮಿಶ್ರ ಸರ್ಕಾರ ಮುಂದುವರೆಯುತ್ತದೋ ಬಿಡುತ್ತೋ ಗೊತ್ತಿಲ್ಲವಾದರೂ ಸರ್ಕಾರದ ವಿವಿಧ ನೀತಿಗಳನ್ನು ಪ್ರಕಟಿಸುವಲ್ಲಿ ಸಚಿವರು ಹಿಂದೆ ಬೀಳುತ್ತಿಲ್ಲ. ಇನ್ನು ಮುಂದೆ ರಾಜ್ಯದಲ್ಲಿ ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ಮಂಜೂರಾತಿ ನೀಡದಿರುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಸವರಾಜು ಹೊರಟ್ಟಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ನಡೆದ ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘದ ಆಶ್ರಯದಲ್ಲಿ ನಡೆದ ಬೆಳಗಾವಿ, ಬಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆಗಳ ಅನುದಾನಕ್ಕೆ ಒಳಪಡುತ್ತಿರುವ ಶಾಲಾ ಕಾಲೇಜು ನೌಕರರಿಂದ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
.
ಸಚಿವರಾಗುವ ಮೊದಲು ಶಿಕ್ಷಕರ ಬೇಡಿಕೆಗಳಿಗಾಗಿ ಹಲವಾರು ಹೋರಾಟಗಳನ್ನು ಮಾಡಿರುವ ತಾವು ಸಚಿವರಾದ ಮೇಲೆ ಹಲವು ಆಡಳಿತಾತ್ಮಕ ತೊಂದರೆಗಳನ್ನು ಎದುರಿಸಿ ಶಿಕ್ಷಕರ ಹಲವು ಬೇಡಿಕೆಗಳನ್ನು ಈಡೇರಿಸಿರುವುದಾಗಿ ಹೇಳಿಕೊಂಡರು.

ಅಧಿಕಾರ ಹಸ್ತಾಂತರವಾದ ನಂತರ ಈ ಖಾತೆ ತಮಗೆ ದೊರೆಯುವುದಿಲ್ಲ ಎಂದರಿತ ಅಧಿಕಾರಿಗಳು ತಮ್ಮ ಮಾತು ಕೇಳುತ್ತಿಲ್ಲ ಎಂದೂ ಹೇಳಿದ್ದಾರೆ. ಅಂಥ ಅಧಿಕಾರಿಗಳು ತಾನು 2010ರ ವರೆಗೆ ವಿಧಾನಪರಿಷತ್ ಸದಸ್ಯನಾಗಿ ಮುಂದುವರೆಯುವ ವಿಷಯವನ್ನು ಮರೆಯಬಾರದು ಎಂದು ಎಚ್ಚರಿಸಿದ್ದಾರೆ.
ಮತ್ತಷ್ಟು
ಕೆಪಿಸಿಸಿ ಪುನಾರಚನೆ ?
ಗಡುವಿನ ಗೊಡವೆ ಬೇಕಿಲ್ಲ: ಮುಖ್ಯಮಂತ್ರಿ
ಕುಮಾರಸ್ವಾಮಿ ಇಂದೂ ರಾಜೀನಾಮೆ ಇಲ್ಲ
ಜೆಡಿಎಸ್‌ಗೆ ಕಾಂಗ್ರೆಸ್ ಬಾಹ್ಯ ಬೆಂಬಲ?
ಬೆಂಗಳೂರಿನ ಯೋಧನ ಆತ್ಮಹತ್ಯೆ
ಕರುಣಾನಿಧಿ ವಿರುದ್ಧ ರಾಜ್ಯದಲ್ಲೂ ಕೇಸು ದಾಖಲು