ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕಾಂಗ್ರೆಸ್‌ನ ಕಾದು ನೋಡುವ ತಂತ್ರ
ಕರ್ನಾಟಕದಲ್ಲಿ, ಒಂದು ಪಕ್ಷ ಭಾರತೀಯ ಜನತಾ ಪಕ್ಷದೊಂದಿಗೆ ಜೆಡಿಎಸ್ ಸಂಬಂಧ ಹರಿದುಕೊಂಡಲ್ಲಿ, ತಾನು ಜೆಡಿಎಸ್‌ಗೆ ಹೊರಗಿನಿಂದ ಬೆಂಬಲ ನೀಡುವ ಸಾಧ್ಯತೆಯನ್ನು ತಳ್ಳಿಹಾಕದ ಕಾಂಗ್ರೆಸ್‌, ರಾಜ್ಯ ರಾಜಕಾರಣದಲ್ಲಿ ಕಾದು ನೋಡುವ ತಂತ್ರ ಅನುಸರಿಸಲಿದೆ ಎಂದು ಎಐಸಿಸಿ ಮಹಾಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ಚೌಹಾನ್ ಹೇಳಿದ್ದಾರೆ.

ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಮಿತ್ರಪಕ್ಷಗಳ ನಡುವೆ ಎದ್ದಿರುವ ಭಿನ್ನಾಭಿಪ್ರಾಯ ಒಂದು ವೇಳೆ ಸಂಬಂಧ ಹರಿಯುವ ಮಟ್ಟಕ್ಕೆ ತಲುಪಿದರೆ, ಕಾಂಗ್ರೆಸ್ ಪಾತ್ರದ ಕುರಿತು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರವನ್ನು ವಿದೇಶ ಪ್ರವಾಸದಲ್ಲಿ ಸೋನಿಯಾ ಗಾಂಧಿ ಮರಳಿದ ನಂತರ ತೆಗೆದುಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಕೂಡ ಜೆಡಿ ಎಸ್ ಪಕ್ಷಕ್ಕೆ ಹೊರಗಿನಿಂದ ಬೆಂಬಲ ನೀಡುವುದಕ್ಕೆ ಸಿದ್ದವಾಗಿಲ್ಲ. ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಈ ತೀರ್ಮಾನ ಪಕ್ಷಕ್ಕೆ ಮುಳುವಾಗಬಹುದು ಎಂಬ ಆತಂಕ ಪಕ್ಷದ ನಾಯಕರನ್ನು ಕಾಡುತ್ತಿದೆ. ಆಡಳಿತದ ವಿರುದ್ಧ ಅಲೆಯಲ್ಲಿ ನಾವು ಏಕೆ ಸಿಲುಕಿಕೊಳ್ಳಬೇಕು ಎಂದು ರಾಜ್ಯ ನಾಯಕರ ಅಭಿಪ್ರಾಯವಾಗಿದೆ.
ಮತ್ತಷ್ಟು
ಅನುದಾನ ರಹಿತ ಶಾಲೆಗೆ ಮಂಜೂರಾತಿ ಇಲ್ಲ
ಕೆಪಿಸಿಸಿ ಪುನಾರಚನೆ ?
ಗಡುವಿನ ಗೊಡವೆ ಬೇಕಿಲ್ಲ: ಮುಖ್ಯಮಂತ್ರಿ
ಕುಮಾರಸ್ವಾಮಿ ಇಂದೂ ರಾಜೀನಾಮೆ ಇಲ್ಲ
ಜೆಡಿಎಸ್‌ಗೆ ಕಾಂಗ್ರೆಸ್ ಬಾಹ್ಯ ಬೆಂಬಲ?
ಬೆಂಗಳೂರಿನ ಯೋಧನ ಆತ್ಮಹತ್ಯೆ