ಪೂರ್ವ ಒಪ್ಪಂದದಂತೆ ನಿಗದಿತ ದಿನಾಂಕ ಅಕ್ಟೋಬರ್ 3 ರಂದು ಅಧಿಕಾರ ಹಸ್ತಾಂತರ ಮಾಡದಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಹಿರಿಯ ನಾಯಕರು ನಾಳೆ ದೆಹಲಿಯಲ್ಲಿ ಸಭೆ ನಡೆಸಲಿದ್ದಾರೆ.
ಈ ಹಿಂದೆ 20 ತಿಂಗಳ ಆಡಳಿತದ ನಂತರ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡುವ ಸಂಬಂಧ ಒಪ್ಪಂದವಾಗಿದ್ದರೂ ಜೆಡಿಎಸ್ ಕೊನೆ ಕ್ಷಣದಲ್ಲಿ ತನ್ನ ಒಪ್ಪಂದವನ್ನು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಭೆಗೆ ಹೆಚ್ಚಿನ ಮಹತ್ವ ಬಂದಿದೆ.
ಈ ನಡುವೆ ಬಿಜೆಪಿ ಪಕ್ಷದ ಎಲ್ಲಾ ಸಚಿವರು ಹಾಗೂ ಶಾಸಕರು ಕುಮಾರಸ್ವಾಮಿಯವರಿಗೆ ರಾಜೀನಾಮೆಯನ್ನು ನೀಡಿದ್ದು ಈ ಬೆಳವಣಿಗೆ ಹಿನ್ನೆಲೆಯಲ್ಲಿ ನಾಳಿನ ದೆಹಲಿ ಸಭೆ ರಾಜ್ಯ ರಾಜಕಾರಣದ ಹೊಸ ಸಾಧ್ಯತೆಗೆ ನಾಂದಿ ಹಾಡಲಿದೆ.
ಮಂಗಳವಾರ ರಾತ್ರಿ ಸಾಮೂಹಿಕ ರಾಜೀನಾಮೆಯನ್ನು ಮುಖ್ಯಮಂತ್ರಿಗೆ ಸಲ್ಲಿಸಿರುವ ಸಂದರ್ಭದಲ್ಲಿ ಕುಮಾರಸ್ವಾಮಿ ಸರಿಯಾದ ರೀತಿಯಲ್ಲಿ ಸ್ಪಂದಿಸಲಿಲ್ಲ ಎಂದು ಯಡಿಯೂಪ್ಪ ಹೇಳಿರುವುದು ಮೈತ್ರಿ ಸರ್ಕಾರದ ವೈಮನಸ್ಯಕ್ಕೆ ಸಾಕ್ಷಿಯಾಗಿದೆ.
|