ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬಿಜೆಪಿ ಅಡಳಿತ ತೃಪ್ತಿಕರ : ವೆಂಕಯ್ಯ
ಬಿಜೆಪಿ ತನ್ನ 20 ತಿಂಗಳ ಆಡಳಿತವನ್ನು ಸಮರ್ಥವಾಗಿ ನೀಡಿದ್ದು ಈ ಬಗ್ಗೆ ಪಕ್ಷಕ್ಕೆ ಸಂಪೂರ್ಣ ತೃಪ್ತಿಯಿದೆ ಎಂದು ಪ್ರಕಟಿಸಿದೆ.

ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವೆಂಕಯ್ಯ ನಾಯ್ಡು ಅಧಿಕಾರ ಹಸ್ತಾಂತರ ನಡೆಯುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರೆ. ಒಂದು ವೇಳೆ ಅಧಿಕಾರ ಹಸ್ತಾಂತರ ನಡೆಯದೆ ಹೋದಲ್ಲಿ ಒಪ್ಪಂದ ಉಲ್ಲಂಘಿಸಿದ ಪಕ್ಷಕ್ಕೆ ಜನರೇ ಪಾಠ ಕಲಿಸುತ್ತಾರೆ ಎಂದರು.

ಬಿಜೆಪಿ ತನ್ನ ಮೈತ್ರಿ ಪಕ್ಷದೊಂದಿಗೆ ಜನಪರ ಆಡಳಿತವನ್ನು ನೀಡಿದೆ ಎಂದು ಶ್ಲಾಘಿಸಿದ ನಾಯ್ಡು ಮುಂದಿನ 20 ತಿಂಗಳು ಯಡಿಯೂರಪ್ಪ ನೇತೃತ್ವದಲ್ಲಿ ಮಾದರಿ ಸರ್ಕಾರವನ್ನು ನೀಡುವುದು ನಮ್ಮ ಉದ್ದೇಶವಾಗಿದೆ ಎಂದಿದ್ದಾರೆ.

ಯಡಿಯೂರು ಸಿದ್ಧಲಿಂಗೇಶ್ವರ ದೇಗುಲದಲ್ಲಿ ಯಡಿಯೂರಪ್ಪ : ಈ ನಡುವೆ ಉಪಮುಖ್ಯಮಂತ್ರಿ ಯಡಿಯೂರಪ್ಪ ಯಡಿಯೂರು ಸಿದ್ಧಲಿಂಗೇಶ್ವರ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಒಪ್ಪಂದದಂತೆ ಇಂದಿಗೆ ಅವಧಿ ಮುಗಿದಿದೆ. ನಿನ್ನೆ ರಾತ್ರಿಯೇ ರಾಜೀನಾಮೆ ನೀಡಿದ್ದೇವೆ. ಜೆಡಿಎಸ್ ಅಧಿಕಾರ ಹಸ್ತಾಂತರ ಮಾಡುವ ಬಗ್ಗೆ ನನಗೆ ಪೂರ್ಣ ಭರವಸೆಯಿದೆ ಎಂದು ಹೇಳಿದರು.
ಮತ್ತಷ್ಟು
ಅಧಿಕಾರ ಹಸ್ತಾಂತರ ಉಲ್ಲಂಘನೆ: ಸಭೆ
ಹೈಕಮಾಂಡ್ ತೀರ್ಮಾನ ಅಂತಿಮ : ದೇವೇಗೌಡ
ಕಾಂಗ್ರೆಸ್‌ನ ಕಾದು ನೋಡುವ ತಂತ್ರ
ಅನುದಾನ ರಹಿತ ಶಾಲೆಗೆ ಮಂಜೂರಾತಿ ಇಲ್ಲ
ಕೆಪಿಸಿಸಿ ಪುನಾರಚನೆ ?
ಗಡುವಿನ ಗೊಡವೆ ಬೇಕಿಲ್ಲ: ಮುಖ್ಯಮಂತ್ರಿ