ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಚೌಕಾಸಿ ವ್ಯಾಪಾರಕ್ಕೆ ಅವಕಾಶವಿಲ್ಲ: ಬಿಜೆಪಿ
NRB
ಜೆಡಿಎಸ್-ಬಿಜೆಪಿ ನಡುವೆ ಅಧಿಕಾರ ಹಂಚಿಕೆಯನ್ನು ಸುಸೂತ್ರವಾಗಿ ನೆರವೇರಿಸುವ ನಿರ್ಣಾಯಕ ಮಾತುಕತೆಗೆ ಮುನ್ನ, ಜೆಡಿಎಸ್‌ನಿಂದ ಯಾವುದೇ ಕಠಿಣ ಚೌಕಾಸಿ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ತಿಳಿಸಿದ್ದಾರೆ.

" ನಾವು ಕೇಂದ್ರ ನಾಯಕತ್ವಕ್ಕೆ ಸ್ಪಷ್ಟವಾಗಿ ಹೇಳಿದ್ದೇವೆ. 20 ತಿಂಗಳ ಹಿಂದೆ ಯಾವ ರೀತಿಯ ಒಪ್ಪಂದಕ್ಕೆ ಜೆಡಿಎಸ್ ಬದ್ಧವಾಗಿತ್ತೋ ಅದೇ ಒಪ್ಪಂದ ಆಗಬೇಕು. ಒಪ್ಪಂದದಲ್ಲಿ ಲವಲೇಶ ಬದಲಾವಣೆಗೂ ನಮ್ಮ ವಿರೋಧವಿದೆ. ಹೊಸ ಬೇಡಿಕೆಗಳಿಗೂ ನಾವು ಮಣೆ ಹಾಕುವುದಿಲ್ಲ" ಎಂದು ಅವರು ಖಡಾಖಂಡಿತವಾಗಿ ಹೇಳಿದ್ದಾರೆ.

ಜೆಡಿಎಸ್ ಸಂಭಾವಿತರ ರೀತಿಯಲ್ಲಿ ಹಿಂದಿನ ಒಪ್ಪಂದಕ್ಕೆ ಔಚಿತ್ಯಪೂರ್ಣವಾಗಿ ಒಪ್ಪಬೇಕು ಎಂದೂ ಯಡಿಯೂರಪ್ಪ ಹೇಳಿದರು. ಬಿಕ್ಕಟ್ಟಿಗೆ ಸೌಹಾರ್ದ ಪರಿಹಾರ ಹುಡುಕುವ ಸಲುವಾಗಿ ಕೇಂದ್ರದ ಬಿಜೆಪಿ ವರಿಷ್ಠರ ಭೇಟಿ ಸಲುವಾಗಿ ಇಲ್ಲಿಗೆ ಆಗಮಿಸಿರುವ ಅವರು, ಖಾತೆಯಲ್ಲಿ ಯಾವುದೇ ಬದಲಾವಣೆಗೆ ಆಸ್ಪದ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

20 ತಿಂಗಳ ಹಿಂದೆ ಖಾತೆಗಳನ್ನು ಪರಸ್ಪರ ಬದಲಾವಣೆ ಮಾಡುವ ಒಪ್ಪಂದ ಮಾಡಲಾಗಿತ್ತು ಎಂದು ಅವರು ನೆನಪಿಸಿದರು."ಅ.5ರವರೆಗೆ ಕಾಲಾವಕಾಶ ನೀಡುವಂತೆ ದೇವೇಗೌಡ, ಕುಮಾರಸ್ವಾಮಿ ಕೇಳಿದ್ದಾರೆ. ಅವರ ನಾಯಕತ್ವವು ಬೇಟಿ ಮಾಡುತ್ತಿದೆ. ನಮ್ಮ ಸಂಸದೀಯ ಮಂಡಳಿಯೂ ಸಭೆ ಸೇರಲಿದೆ.

ನಮ್ಮ ರಾಷ್ಟ್ರೀಯ ಮುಖಂಡರ ಜತೆ ದೇವೇಗೌಡರು ಮಾತುಕತೆ ನಡೆಸಲಿದ್ದಾರೆ. ಏನಾಗುತ್ತದೋ ನೋಡೋಣ" ಎಂದು ಯಡಿಯೂರಪ್ಪ ನಿರಾಳ ಭಾವದಿಂದ ಹೇಳಿದರು.
ಮತ್ತಷ್ಟು
ಸಿಎಂ ಮನೆಯಲ್ಲಿ ಜೆಡಿಎಸ್ ಮಹತ್ವದ ಸಭೆ
ಕರ್ನಾಟಕ ಬಿಕ್ಕಟ್ಟು: ಬಿಜೆಪಿ ಸಂಸದಿಯ ಸಭೆ
ಅಗರವಾಲ್‌‍ಗೆ ರಾಮಸೇತು ವಿಚಾರಣೆ ಬೇಡ
ವಿಶ್ವವಿಖ್ಯಾತ ದಸರೆಗೆ ಮೈಸೂರು ಸಜ್ಜು
ಕೆಲಸಕ್ಕೆ ಬಿಜೆಪಿ ಸಚಿವರ ಗೈರು ಹಾಜರಿ
ಬಿಜೆಪಿ ಅಡಳಿತ ತೃಪ್ತಿಕರ : ವೆಂಕಯ್ಯ