ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕುಮಾರಸ್ವಾಮಿಯೇ ಸಿಎಂ: ಒತ್ತಡ ಹೇರಲು ಜೆಡಿಎಸ್ ನಿರ್ಧಾರ
ಮಹತ್ವದ ಬೆಳವಣಿಗೆಯೊಂದರಲ್ಲಿ, ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಒತ್ತಡ ಹೇರಲು ಗುರುವಾರ ಮುಂಜಾನೆ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ಸಚಿವರು ಹಾಗೂ ಶಾಸಕರು ನಿರ್ಧರಿಸಿದ್ದಾರೆ.

ಕುಮಾರಸ್ವಾಮಿ ಅತ್ಯುತ್ತಮ ಆಡಳಿತವನ್ನು ತಮ್ಮ 20 ತಿಂಗಳ ಅವಧಿಯಲ್ಲಿ ನೀಡಿದ್ದು, ಅವರೇ ಸಿಎಂ ಆಗಿ ಮುಂದುವರಿಯುವಂತೆ ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುವುದು ಎಂದು ಜೆಡಿಎಸ್ ಸದಸ್ಯರು ಹೇಳಿದ್ದಾರೆ.

ಜೆಡಿಎಸ್ ಸಚಿವರು ಹಾಗೂ ಶಾಸಕರ ಪರವಾಗಿ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ, ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿ ಮುಂದುವರಿಯುವ ನಿರ್ಧಾರಕ್ಕೆ ಎಲ್ಲರೂ ಬದ್ಧರಿರುವುದಾಗಿ ಮಾಧ್ಯಮಗಳಿಗೆ ಹೇಳಿದ್ದಾರೆ.

ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿ ಅಂತಿಮ ತೀರ್ಮಾನ ಕೈಗೊಳ್ಳುವುದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ತೀರ್ಮಾನಕ್ಕೆ ಬಿಟ್ಟಿದ್ದು ಎಂಬ ನಿರ್ಧಾರ ಕೈಗೊಳ್ಳಲಾಗಿದೆ.

ಈ ಎಲ್ಲಾ ಬೆಳವಣಿಗೆಗಳಿಂದ ರಾಜ್ಯ ರಾಜಕಾರಣದ ಗೊಂದಲ ಪರಿಸ್ಥಿತಿ ಹಾಗೇ ಮುಂದುವರಿದಿದ್ದು ಇನ್ನೊಂದೆಡೆ ಬಿಜೆಪಿ ದೆಹಲಿಯಲ್ಲಿ ಭಾರೀ ಸಮಾಲೋಚನೆ ನಡೆಸುತ್ತಿದೆ.
ಮತ್ತಷ್ಟು
ಶುಕ್ರವಾರ ಸಚಿವ ಸಂಪುಟ ಸಭೆ
ಚೌಕಾಸಿ ವ್ಯಾಪಾರಕ್ಕೆ ಅವಕಾಶವಿಲ್ಲ: ಬಿಜೆಪಿ
ಸಿಎಂ ಮನೆಯಲ್ಲಿ ಜೆಡಿಎಸ್ ಮಹತ್ವದ ಸಭೆ
ಕರ್ನಾಟಕ ಬಿಕ್ಕಟ್ಟು: ಬಿಜೆಪಿ ಸಂಸದಿಯ ಸಭೆ
ಅಗರವಾಲ್‌‍ಗೆ ರಾಮಸೇತು ವಿಚಾರಣೆ ಬೇಡ
ವಿಶ್ವವಿಖ್ಯಾತ ದಸರೆಗೆ ಮೈಸೂರು ಸಜ್ಜು