ಅಧಿಕಾರ ಹಸ್ತಾಂತರದ ಸಂಬಂಧ ಬಿಜೆಪಿಗೆ ಯಾವ ಹೊಸ ಷರತ್ತನ್ನೂ ವಿಧಿಸುವುದಿಲ್ಲ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಅವರು ಶುಕ್ರವಾರ ದೆಹಲಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ದೆಹಲಿಯಲ್ಲಿ ನಡೆಯುವ ಜೆಡಿಎಸ್ ಸಂಸದೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿರುವ ಅವರು ಬಳ್ಳಾರಿ ದೊರೆಗಳು ತಮ್ಮ ವಿರುದ್ಧ ಮಾಡಿದ ಲಂಚದ ಆರೋಪ ಹಾಗೂ ಕೊಲೆ ಸಂಚು ಆರೋಪಗಳಿಗೆ ತೀವ್ರವಾಗಿ ಸಿಎಂ ಅವರ ವಿರುದ್ದ ಆರೋಪ ಮಾಡಲಾಗಿದೆ.
ನೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಚನ ಭ್ರಷ್ಟರಾದರೂ ಪರವಾಗಿಲ್ಲ ಜನತಾ ನ್ಯಾಯಾಲಯದ ಮುಂದೆ ಹೋಗುವುದಾಗಿ ಬೆಂಗಳೂರಿನಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಹೇಳಿದ್ದನ್ನು ಪುನರುಚ್ಚರಿಸಿದ ದೇವೇಗೌಡರು ಚುನಾವಣೆಗೆ ಹೋಗುವ ಇಂಗಿತವನ್ನು ವ್ಯಕ್ತಪಡಿಸಿದರು.
ತಮ್ಮ ಪಕ್ಷದ ಸಂಸದೀಯ ಸಭೆಯ ನಂತರ ಬಿಜೆಪಿ ರಾಷ್ಟ್ತ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ತಮ್ಮ ಪಕ್ಷ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿ ಒಂದು ನಿರ್ಧಾರಕ್ಕೆ ಬರಲಿದ ಎಂದು ತಿಳಿಸಿದರು.
ತಮ್ಮ ಪಕ್ಷ ಕಾಂಗ್ರೆಸ್ನೊಂದಿಗೆ ಕೈಜೋಡಿಸಿ ಸರಕಾರ ನಡೆಸುವ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
|