ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸಂಪುಟ ಸಭೆಗೆ ಬಿಜೆಪಿ ಸಚಿವರ ಗೈರು
ಅಕ್ಟೋಬರ್ 18ರಂದು ವಿಧಾನಸಭೆಯಲ್ಲಿ ವಿಶ್ವಾಸ ಮತ ಕೋರುವ ನಿರ್ಣಯನ್ನು ತೆಗೆದುಕೊಳ್ಳಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಜೆಪಿ ಸಚಿವರು ಯಾರೂ ಭಾಗವಹಿಸಲಿಲ್ಲ.

ತಾವು ಸಚಿವ ಹುದ್ದೆಗಳಿಗೆ ರಾಜೀನಾಮೆ ನೀಡಿರುವ್ಯದರಿಂದ ಸಚಿವ ಸಂಪುಟಕ್ಕೆ ಹಾಜರಾಗಿಲ್ಲ ಎಂದು ತಮ್ಮ ಸಚಿವರೊಂದಿಗೆ ಬೆಂಗಳೂರಿನಲ್ಲೇ ಇರುವ ಯಡಿಯೂರಪ್ಪ ತಿಳಿಸಿದ್ದಾರೆ. ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿ ಐದರ ವರೆಗೆ ಜೆಡಿಎಸ್ ಗಡುವು ಕೋರಿರುವ ಹಿನ್ನೆಲೆಯಲ್ಲಿ ತಮಗೆ ಅಧಿಕಾರ ದೊರೆಯುವ ಅವಕಾಶವಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.

ತಾನು ವೈಯಕ್ತಿಕವಾಗಿ ಯಾವ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ, ತಮ್ಮ ರಾಷ್ಟ್ತ್ರೀಯ ಬಿಜೆಪಿ ನಾಯಕರ ತೀರ್ಮಾನವೆ ಅಂತಿಮ ಎಂದು ಹೇಳಿದ್ದಾರೆ.
ಮತ್ತಷ್ಟು
ಬಿಜೆಪಿಗೆ ಹೊಸ ಷರತ್ತು ವಿಧಿಸುವುದಿಲ್ಲ: ದೇವೇಗೌಡ
ತುರ್ತು ಸಚಿವ ಸಂಪುಟ ಸಭೆ ; ಬಹಿಷ್ಕರಿಸಲು ಬಿಜೆಪಿ ನಿರ್ಧಾರ
ಕ ಸಾಪ ನೌಕರರ ಪ್ರತಿಭಟನೆ 8 ನೇ ದಿನಕ್ಕೆ
ಜೆಡಿಎಸ್ ವಿರುದ್ಧವೂ ಉದ್ದನೆಯ ಪಟ್ಟಿ:ಯಡ್ಡಿ
ಸಿಎಂ-ರಾಜ್ಯಪಾಲ ಭೇಟಿ: ಇಂದು ಕಾಂಗ್ರೆಸ್ ಸರದಿ
ಒಪ್ಪಂದ ಮುರಿದು ಚುನಾವಣೆಗೆ ಸಿದ್ಧ: ಕುಮಾರಸ್ವಾಮಿ ಬೆದರಿಕೆ