ಕರ್ನಾಟಕದಲ್ಲಿ ರಾಜಕೀಯ ಬಿಕ್ಕಟ್ಟು ಮುಂದಿನವಾರವೂ ಮುಂದವರೆಯುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ.
ಬೆಂಗಳೂರಿನಲ್ಲಿ ಗುರುವಾರ ನಡೆದ ಜೆಡಿಎಸ್ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿಯನ್ನು ಎಗ್ಗಾಮುಗ್ಗಾ ಟೀಕಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ದೇವೇಗೌಡರು ಜನತಾ ನ್ಯಾಯಾಲಯಕ್ಕೆ ಹೋಗುವುದು ಲೇಸು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಇಷ್ಟೆಲ್ಲಾ ರಾದ್ದಾಂತ ಆದಮೇಲೆ ಮುಂದೇನು ಎಂಬ ಪ್ರಶ್ನೆ ರಾಜ್ಯ ಜನತೆಯನ್ನು ಕಾಡುತ್ತಿದೆ. ಬಿಜೆಪಿ ವಿರುದ್ಧ ದೇವೇಗೌಡರು ಆರೋಪಗಳ ಪಟ್ಟಿಯನ್ನೇ ತಯಾರಿಸಿಕೊಂಡಿದ್ದಾರೆ.
ಶುಕ್ರವಾರ ಬಿಜೆಪಿ ನಾಯಕ ಯಡಿಯೂರಪ್ಪ ಅವರು ತಮ್ಮ ಪಕ್ಷದ ಪರವಾಗಿ ಆರೋಪಗಳ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ. ಈಗಿರುವ ಪರಿಸ್ಥಿತಿಯಲ್ಲಿ ಮುಂದಿನ ವ್ಯವಸ್ಥೆ ಕುರಿತು ಜನರಿಗೆ ತಮ್ಮ ನಿಲುವನ್ನು ತಿಳಿಸಬೇಕಾದ ಕರ್ತವ್ಯವನ್ನು ಜೆಡಿಎಸ್ ಮರೆತಂದಿದೆ.
ಬಿಜೆಪಿಗೆ ಅಧಿಕಾರವನ್ನು ನಿರಾಕರಿಸಿ, ಮತ್ತೆ ಅದರ ಸಹವಸವನ್ನು ಮಾಡುವಂತಿಲ್ಲ. ಇನ್ನು ಜೆಡಿಎಸ್ಗೆ ಉಳಿದಿರುವ ಆಯ್ಕೆ ಎರಡೇ: ಕಾಂಗ್ರೆಸ್ಸಿನ ಸಹಕಾರವನ್ನು ಬೇಡಿ ಪಡೆದು ಇನ್ನಷ್ಟು ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಅಥವಾ ವಿಧಾನಸಭೆಯ ವಿಸರ್ಜನೆಗೆ ಶಿಫಾರಸು ಮಾಡಿ ಚುನಾವಣೆಯನ್ನು ಎದುರಿಸುವುದು.
ಇಪ್ಪತ್ತು ತಿಂಗಳ ಸಾಧನೆಯಿಂದ ಕುಮಾರಸ್ವಾಮಿಗೆ ಲಭ್ಯವಾಗಿದೆ ಎನ್ನಲಾದ ಜನಬೆಂಬಲವನ್ನೇ ನಂಬಿ ಚುನಾವಣಾ ಸಮರಕ್ಕೆ ಇಳಿಯುವುದೇ ಸರಿಯಾದ ಮಾರ್ಗ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
|